ನವದೆಹಲಿ: ಆರ್ ಎಸ್ ಎಸ್ ಬಗ್ಗೆ ನೀಡಿರುವ ಪ್ರತಿಕ್ರಿಯೆಗೆ ಬದ್ಧನಾಗಿದ್ದೇನೆ ಎಂದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ "ದ್ವೇಷದ ಮತ್ತು ಒಡೆಯುವ ಅಜೆಂಡಾ" ವಿರುದ್ಧ ಹೋರಾಟ ಮುಂದುವರೆಸಲಿದ್ದೇನೆ ಎಂದು ಗುರುವಾರ ಹೇಳಿದ್ದಾರೆ.
"ಆರ್ ಎಸ್ ಎಸ್ ನ ದ್ವೇಷದ ಮತ್ತು ಒಡೆಯುವ ಅಜೆಂಡಾ ವಿರುದ್ಧ ಹೋರಾಟ ಎಂದಿಗೂ ನಿಲ್ಲಿಸುವುದಿಲ್ಲ. ನಾನು ಆಡಿರುವ ಪ್ರತಿ ಮಾತಿಗೂ ಬದ್ಧ" ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ನೆನ್ನೆ ರಾಹುಲ್ ಅವರು ಮಹಾತ್ಮ ಗಾಂಧಿ ಹತ್ಯೆಗೆ ಆರ್ ಎಸ್ ಎಸ್ ಸಂಘಟನೆಯನ್ನು ದೂಷಿಸಿಲ್ಲ ಬದಲಾಗಿ ಜನ ಆ ಸಂಬಂಧ ಕಲ್ಪಿಸಿದರು ಎಂದು ಸುಪ್ರೀಂ ಕೋರ್ಟ್ ನಲ್ಲಿ ಹೇಳಿದ್ದರು.