ಪ್ರಧಾನ ಸುದ್ದಿ

ಬೆಂಗಳೂರಿನಲ್ಲಿ 14ನೇ ಪ್ರವಾಸಿ ಭಾರತೀಯ ದಿವಸ್‌ ಆಚರಣೆ: ಸಿಎಂ ಸಿದ್ದರಾಮಯ್ಯ

Lingaraj Badiger
ನವದೆಹಲಿ: ಬೆಂಗಳೂರಿನಲ್ಲಿ 2017ರ ಜನವರಿಯಲ್ಲಿ 14ನೇ ಪ್ರವಾಸಿ ಭಾರತೀಯ ದಿವಸ್‌ ಆಚರಣೆಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಿಎಂ, ಜನವರಿ 7, 8 ಮತ್ತು 9ರಂದು ಪ್ರವಾಸಿ ಭಾರತೀಯ ದಿವಸ್ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮವನ್ನು ಕರ್ನಾಟಕದಲ್ಲಿ ಆಚರಿಸಲು ಈ ಬಾರಿ ಅವಕಾಶ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಸಿಎಂ, ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಯಶಸ್ವಿಯಾಗಿ ನಡೆಸಿ  ಕರ್ನಾಟಕದತ್ತ ಉದ್ಯಮಗಳನ್ನು ಸೆಳೆದಿದ್ದೇವೆ.ಈ ವರ್ಷದ ಮೊದಲ 6 ತಿಂಗಳಲ್ಲೇ  68 ಸಾವಿರ ಕೋಟಿ ವಿದೇಶಿ ಬಂಡವಾಳ ಹರಿದು ಬಂದಿದೆ ಎಂದರು.
ಇದೇ ವೇಳೆ ಪ್ರವಾಸಿ ನೋಂದಣಿ ಪೋರ್ಟಲ್‌ಗ‌ೂ ಚಾಲನೆ ನೀಡಿದ ಸಿದ್ದರಾಮಯ್ಯ, ಪ್ರವಾಸಿ ದಿವಸ್‌ ನಲ್ಲಿ ಭಾಗವಹಿಸಲು ಭಾರತೀಯರಿಗೆ 100ಡಾಲರ್‌ ಶುಲ್ಕ ವಿದ್ದು, ವಿದೇಶಿಗರ ನೊಂದಣಿಗೆ 150 ಡಾಲರ್‌ ಶುಲ್ಕ ವಿಧಿಸಲಾಗಿದೆ ಎಂದರು.
ಮೂರು ದಿನಗಳ ಕಾಲ ಅನಿವಾಸಿ ಭಾರತೀಯರೊಂದಿಗೆ ಚರ್ಚೆ ನಡೆಸಿ ಹಲವಾರು ಎನ್‌ಆರ್‌ಐಗಳ ಸಲಹೆ ಕೇಳುತ್ತೇವೆ  ಎಂದು ಸಿಎಂ ತಿಳಿಸಿದರು. 
ಜನವರಿ 9 ರಂದು ಮಹಾತ್ಮಗಾಂಧಿಜಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ದಿನವಾಗಿದ್ದು ಆ ದಿನದ ನೆನಪಿಗಾಗಿ ಮುಖ್ಯವಾಗಿ ಭಾರತದ ಅಭಿವೃದ್ಧಿಗೆ ಸಾಗರೋತ್ತರ ಭಾರತೀಯ ಸಮುದಾಯದ ಕೊಡುಗೆ ಗುರುತಿಸಲು 2003ರಿಂದ ಪ್ರತಿ ವರ್ಷ ಪ್ರವಾಸಿ ಭಾರತಿಯ ದಿವಸ್‌ ಆಚರಣೆಯನ್ನು ಮಾಡಲಾಗುತ್ತದೆ.
SCROLL FOR NEXT