ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ನವದೆಹಲಿ: ಮಹಿಳೆಯರಿಗಾಗಿ ದೆಹಲಿ ಕಮಿಷನರ್ (ಡಿ ಸಿ ಡಬ್ಲ್ಯೂ) ಸ್ವಾತಿ ಮಲಿವಾಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಬಂಧಿಸಲು ಹವಣಿಸುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಆರೋಪಿಸಿದ್ದಾರೆ.
"ಮೂಲಗಳು- ಸ್ವಾತಿ ಮಲಿವಾಲ್ ಒಳ್ಳೆಯ ಕೆಲಸ ಮಾಡುತ್ತಿರುವುದಕ್ಕೆ ಅವರನ್ನು ತೆಗೆದುಹಾಕಲು ಎಲ್ ಜಿ ಮತ್ತು ಪ್ರಧಾನಿಮಂತ್ರಿ ಕಾರ್ಯಾಲಯ ತುದಿಗಾಲಲ್ಲಿ ನಿಂತಿವೆ. ಅವರನ್ನು ಮುಂದಿನ ವಾರಗಳಲ್ಲಿ ಬಂಧಿಸಿ ತೆಗೆದು ಹಾಕಲಿದ್ದಾರೆ" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಮೊಹಲ್ಲಾ ಕ್ಲಿನಿಕ್ ಗಳನ್ನು ಸ್ಥಾಪಿಸಿದ ಹಾಗು ಮೇಲುಸೇತುವೆ ನಿರ್ಮಾಣದಲ್ಲಿ ಹಣ ಉಳಿಸಿದ ತಂಡವನ್ನು ವಜಾ ಮಾಡಲು ಎಲ್ ಜಿ ತುದಿಗಾಲಲ್ಲಿ ನಿಂತಿದ್ದಾರೆ ಎಂದು ಕೂಡ ಕೇಜ್ರಿವಾಲ್ ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷ ಮಾಡಿರುವ ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿರುವುದಾಗಿ ಜಂಗ್ ಹೇಳಿರುವ ಹಲವು ಪತ್ರಿಕಾ ವರದಿಗಳನ್ನು ಕೂಡ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಡಿಡಿಎ ಅಡಿ 10 ಆಸ್ಪತ್ರೆ ಸ್ಥಾಪಿಸಲು ಜಾಗ ಕೋರಿದ್ದು ತಪ್ಪೇ ಎಂದು ಪ್ರಶ್ನಿಸಿರುವ ಕೇಜ್ರಿವಾಲ್ ಈ ಪ್ರಸ್ತಾವನೆಯನ್ನು ಮೋದಿ ಮತ್ತು ಎಲ್ ಜಿ ತಿರಸ್ಕರಿಸಿರುವುದಾಗಿ ತಿಳಿಸಿದ್ದಾರೆ.
"ಸಾರ್ವಜನಿಕರಿಗೆ ಸಹಾಯ ಮಾಡಿದ ಹಲವಾರು ಎಎಪಿ ನಿರ್ಣಗಳನ್ನು ಎಲ್ ಜಿ ಮೂಲಕ ನಿರಾಕರಿಸಲು ಮೋದಿ ನಿರ್ಧರಿಸಿದ್ದಾರೆ" ಎಂದು ಕೂಡ ಕೇಜ್ರಿವಾಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics