ನವದೆಹಲಿ: ಕೇ೦ದ್ರ ಮಾನವ ಸ೦ಪನ್ಮೂಲ ಸಚಿವಾಲಯ ಬುಧವಾರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿ ರಾಜ್ಯದ 14 ಶಿಕ್ಷಕರು ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸೆಪ್ಟೆಂಬರ್ 5, ಶಿಕ್ಷಕರ ದಿನಾಚರಣೆಯಂದು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶಿಕ್ಷಕರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ವಿಶೇಷ ವಿಭಾಗದ ಪ್ರಶಸ್ತಿಯನ್ನು ಬೆಳಗಾವಿ ಸರ್ಕಾರಿ ಪ್ರೌಢ ಶಾಲೆಯ ಶಾ೦ತಾರಾಮ್ ಬಿ. ಜೋಗಲೆ ಅವರಿಗೆ ನೀಡಲಾಗುತ್ತಿದ್ದು, ಪ್ರಾಥಮಿಕ, ಪ್ರೌಢ ಹಾಗೂ ವಿಶೇಷ ಶಾಲೆಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ 14 ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಆರ್.ಸಿ. ಪಾವ೯ತಮ್ಮ - ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಜಾಲಹಳ್ಳಿ ಪಶ್ಚಿಮ, ಬೆ೦ಗಳೂರು.
ಡಿ.ಎಚ್. ಲಕ್ಷ್ಮಣಯ್ಯ - ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ನಿಟ್ಟೂರು, ತುಮಕೂರು
ಭೋಜಪ್ಪ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸನಗರ, ಶಿವಮೊಗ್ಗ
ಲೋಕೇಶ್ವಾರಚಾರ್ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಜಾದ್ ಪಾಕ್‍೯, ಚಿಕ್ಕಮಗಳೂರು
ವಿ. ಪ್ರಭಾಕರ್ ಹೆಗ್ಡೆ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಳ್ತ೦ಗಡಿ, ದಕ್ಷಿಣ ಕನ್ನಡ
ನೀಲಮ್ಮ ದ್ಯಾವಪ್ಪ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬದಾಮಿ, ಬಾಗಲಕೋಟೆ
ಶಿವಲೀಲಾ ಹನುಮ೦ತಪ್ಪ ಪದ್ಮಸಾಲಿ - ಹಿರಿಯ ಪ್ರಾಥಮಿಕ ಶಾಲೆ, ರಾಣೆಬೆನ್ನೂರು, ಹಾವೇರಿ
ಸ೦ಗಪ್ಪ ಬಸಪ್ಪ ಬಾಗೇವಾಡಿ - ಹಿರಿಯ ಪ್ರಾಥಮಿಕ ಶಾಲೆ, ಲಿ೦ಗಸಗೂರು, ರಾಯಚೂರು
ಸ೦ಗಪ್ಪ ಗಾಜಿ - ಹಿರಿಯ ಪ್ರಾಥಮಿಕ ಶಾಲೆ, ಗ೦ಗಾವತಿ, ಕೊಪ್ಪಳ
ಶ೦ಕರ ಶೆಟ್ಟಿ - ಸರ್ಕಾರಿ ಪ್ರೌಢಶಾಲೆ, ತುರವೇಕೆರೆ, ತುಮಕೂರು
ಎಚ್.ಬಿ.ದೇವರಾಜು - ಸರ್ಕಾರಿ ಪ್ರೌಢಶಾಲೆ, ಚನ್ನರಾಯಪಟ್ಟಣ್ಣ, ಹಾಸನ
ಮಾಲಾ ಗೋಪಾಲಕೃಷ್ಣ - ಸರ್ಕಾರಿ ಪ್ರೌಢಶಾಲೆ, ಕಮಲಾಪುರ, ಧಾರವಾಡ
ಧನಾಜೀ ತುಕಾರಾಮ್ ಕಾ೦ಬ್ಳೆ - ಸರ್ಕಾರಿ ಪ್ರೌಢಶಾಲೆ, ಔರಾದ್, ಬೀದರ್