ಪ್ರಧಾನ ಸುದ್ದಿ

ಚೈನಾದ ಅತಿ ದೊಡ್ಡ ಶಸ್ತ್ರಾಸ್ತ್ರ ರಫ್ತು ಒಪ್ಪಂದ: ಪಾಕಿಸ್ತಾನಕ್ಕೆ 8 ಸಬ್ ಮೆರೀನ್ ಮಾರಾಟ

Guruprasad Narayana
ಇಸ್ಲಮಾಬಾದ್: ಚೈನಾದ ಅತಿ ದೊಡ್ಡ ಶಸ್ತ್ರಾಸ್ತ್ರ ರಫ್ತು ಒಪ್ಪಂದ ಎಂದು ಬಣ್ಣಿಸಲಾಗಿರುವ ಈ ಒಪ್ಪಂದದಲ್ಲಿ ಪಾಕಿಸ್ತಾನ, ಬೀಜಿಂಗ್ ನಿಂದ ಕನಿಷ್ಠ 8 ದಾಳಿ ಸುಸಜ್ಜಿತ ಸಬ್ ಮೆರೀನ್ ಗಳನ್ನು ಕೊಳ್ಳಲಿದೆ. 
ರೇಡಿಯೋ ಪಾಕಿಸ್ತಾನ ಸೇರಿದಂತೆ ಪಾಕಿಸ್ತಾನ ಸರ್ಕಾರ ಒಡೆತನದ ಹಲವು ಮಾಧ್ಯಮಗಳು ವರದಿ ಮಾಡಿರುವಂತೆ ಪಾಕಿಸ್ತಾನದ ನೌಕಾ ಅಧಿಕಾರಿಗಳು ಭದ್ರತಾ ಒಪ್ಪಂದಗಳನ್ನು ನೋಡಿಕೊಳ್ಳುವ ಸಂಸದೀಯ ಸಮಿತಿಗೆ 5 ಬಿಲಿಯನ್ ಡಾಲರ್ ಒಪ್ಪಂದದ ವಿವರಗಳನ್ನು ನೀಡಿದ್ದಾರೆ. 
ಭಾರತ ಸ್ಕಾರ್ಪಿನ್ ಸಬ್ ಮೆರೀನ್ ಗಳ 20000 ಕ್ಕೂ ಹೆಚ್ಚು ಪುಟಗಳ ಗೌಪ್ಯ ಮಾಹಿತಿ ಸೋರಿ ಹೋಗಿರುವ ದುರಂತದಲ್ಲಿ ಮುಳುಗಿರುವಾಗಲೇ ಈ ಮಾಹಿತಿ ಹೊರಬಿದ್ದಿದೆ. ಫ್ರೆಂಚ್ ಹಡಗು ನಿರ್ಮಾಣ ಸಂಸ್ಥೆ ಡಿ ಸಿ ಎನ್ ಎಸ್ ಮುಂಬೈನಲ್ಲೇ ನಿರ್ಮಿಸುವ ಸ್ಕಾರ್ಪಿನ್ ಗೆ ತಗಲುವ ವೆಚ್ಚ ಒಂದಕ್ಕೆ 3.5 ಬಿಲಿಯನ್ ಡಾಲರ್. 
ಪಾಕಿಸ್ತಾನ ಮತ್ತು ಚೈನಾದ ನಡುವಿನ ಒಪ್ಪಂದದಲ್ಲಿ ಯಾವ ರೀತಿಯ ಸಬ್ ಮೆರೀನ್ ಗಳನ್ನು ಚೈನಾ ಒದಗಿಸುತ್ತಿದೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. 
ಮಾರುಕಟ್ಟೆ ಪಂಡಿತರ ಪ್ರಕಾರ ಚೈನಾ ನೌಕಾದಳದ ಮಾದರಿ 039 ಮತ್ತು ಮಾದರಿ 041 ಯಾನ್-ಕ್ಲಾಸ್ ದಾಳಿ ಸುಸಜ್ಜಿತ ಸಬ್ ಮೆರೀನ್ ಗಳನ್ನು ಚೈನಾ ಒದಗಿಸಲಿದೆ ಎಂದು ಸೂಚಿಸಿದ್ದಾರೆ. 
2023 ರೇ ವೇಳೆಗೆ ಮೊದಲು ನಾಲ್ಕು ಸಬ್ ಮೆರೀನ್ ಗಳನ್ನು ಚೈನಾ ಒದಗಿಸಲಿದ್ದು, ಉಳಿದ ನಾಲ್ಕು ಸಬ್ ಮೆರೀನ್ ಗಳನ್ನು ಕರಾಚಿಯಲ್ಲಿ 2028 ರ ವೇಳೆಗೆ ನಿರ್ಮಿಸಲಾಗುವುದು. 
ಪಾಕಿಸ್ತಾನದ ಮಿಲಿಟರಿ ಹಾರ್ಡ್ವೇರ್ ನ ಅತಿ ದೊಡ್ಡ ರಫ್ತುದಾರ ಚೈನಾ. ಭಾರತದ ಬಳಿ 13 ಸಬ್ ಮೆರೀನ್ ಗಳಿದ್ದರು, ಅವುಗಳಲ್ಲಿ ಅರ್ಧದಷ್ಟು ಮಾತ್ರ ಯಾವುದೇ ಸಮಯದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಲು ಸುಸಜ್ಜಿತವಾಗಿರುತ್ತವೆ. 
SCROLL FOR NEXT