ಪ್ರಧಾನ ಸುದ್ದಿ

ರೋಸಯ್ಯ ಅವಧಿ ವಿಸ್ತರಣೆ ಇಲ್ಲ, ಮಹಾ ರಾಜ್ಯಪಾಲರಿಗೆ ತಮಿಳುನಾಡು ಹೊಣೆ

Lingaraj Badiger
ಚೆನ್ನೈ: ತಮಿಳುನಾಡು ರಾಜ್ಯಪಾಲ ಕೆ.ರೋಸಯ್ಯ ಅವರ ಐದು ವರ್ಷಗಳ ಅವಧಿ ಬುಧವಾರ ಅಂತ್ಯಗೊಂಡಿದ್ದು, ನಿರೀಕ್ಷೆಯಂತೆ ಅವರ ಅವಧಿಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ನಿರಾಕರಿಸಿದೆ.
ತಮಿಳುನಾಡಿಗೆ ನೂತನ ರಾಜ್ಯಪಾಲರು ನೇಮಕವಾಗುವವರೆಗೆ ಮಹಾರಾಷ್ಟ್ರ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಅವರಿಗೆ ಹೆಚ್ಚುವರಿಯಾಗಿ ತಮಿಳುನಾಡು ಜವಾಬ್ದಾರಿಯನ್ನು ನೀಡಲಾಗಿದೆ ಎಂದು ರಾಷ್ಟ್ರಪತಿ ಭವನದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮಧ್ಯಪ್ರದೇಶ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರ ಅವಧಿ ಸಹ ಇಂದೇ ಮುಕ್ತಾಯಗೊಂಡಿದ್ದು, ಗುಜರಾತ್ ರಾಜ್ಯಪಾಲ ಓಂ ಪ್ರಕಾಶ್ ಕೊಹ್ಲಿ ಅವರಿಗೆ ಮಧ್ಯಪ್ರದೇಶದ ಹೆಚ್ಚುವರಿ ಹೊಣೆ ನೀಡಲಾಗಿದೆ.
ತಮಿಳುನಾಡು ನೂತನ ರಾಜ್ಯಪಾಲರ ಸ್ಥಾನಕ್ಕೆ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ಹೆಸರು ಕೇಳಿಬಂದಿತ್ತು. ಆದರೆ ಇದುವರೆಗೂ ಕೇಂದ್ರ ಸರ್ಕಾರ ಆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
SCROLL FOR NEXT