೨೩ ಜನ ಪ್ರಯಾಣಿಸುತ್ತಿದ್ದ ಇಂಡೋನೇಷಿಯಾ ಪೊಲೀಸ್ ವಿಮಾನ ನಾಪತ್ತೆ
ಸಿಂಗಾಪುರ್ ಬಳಿಯ ಭಾತಮ್ ದ್ವೀಪಕ್ಕೆ ತೆರಳುತ್ತಿದ್ದ, ೧೩ ಜನರನ್ನು ಹೊತ್ತೊಯ್ದಿದ್ದ ಇಂಡೋನೇಷಿಯಾ ಪೊಲೀಸ್ ವಿಮಾನ ಶನಿವಾರ ಸಂಪರ್ಕ ಕಳೆದುಕೊಂಡಿದೆ ಎಂದು ಅಧಿಕಾರಿಗಳು
ಜಕಾರ್ತಾ: ಸಿಂಗಾಪುರ್ ಬಳಿಯ ಭಾತಮ್ ದ್ವೀಪಕ್ಕೆ ತೆರಳುತ್ತಿದ್ದ, ೧೩ ಜನರನ್ನು ಹೊತ್ತೊಯ್ದಿದ್ದ ಇಂಡೋನೇಷಿಯಾ ಪೊಲೀಸ್ ವಿಮಾನ ಶನಿವಾರ ಸಂಪರ್ಕ ಕಳೆದುಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುಮಾತ್ರ ದ್ವೀಪದಿಂದ ದಕ್ಷಿಣಕ್ಕಿರುವ ಬಾಂಗ್ಕ ದ್ವೀಪದಿಂದ ಹೊರಟಿದ್ದ ಈ ವಿಮಾನದಲ್ಲಿ ಐದು ಜನ ವಿಮಾನ ಸಿಬ್ಬಂದಿ ಮತ್ತು ೮ ಜನ ಪ್ರಯಾಣಿಕರಿದ್ದರು. ಮೇಲೇರಿದ ೫೦ ನಿಮಿಷಗಳಲ್ಲಿ ವಿಮಾನ ಸಂಪರ್ಕ ಕಳೆದುಕೊಂಡಿದೆ.
ಮೆನ್ಸನಾಕ್ ಮತ್ತು ಸೆಬಂಕಾ ದ್ವೀಪಗಳ ನಡುವೆ ಸಮುದ್ರದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದೇವೆ ಎಂದು ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ದಳದ ಅಧ್ಯಕ್ಷ ಹೆನ್ರಿ ಬಂಬಂಗ್ ಸೊಎಲಿಸ್ಟ್ಯೋ ಹೇಳಿದ್ದಾರೆ.
ಗ್ರಾಮಸ್ಥರಿಗೆ ಆ ವಿಮಾನದ ಆಸನ, ಪೊಲೀಸರ ದಾಖಲೆಗಳು ಮತ್ತು ಫೋನ್ ಸಿಕ್ಕಿದೆ ಎಂದು ಕೂಡ ಅವರು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.