ಪ್ರಧಾನ ಸುದ್ದಿ

ಟ್ರಂಪ್ ವ್ಯವಹಾರ ಚತುರತೆ ಕಾಶ್ಮೀರ ವಿವಾದಲ್ಲಿ ಮಧ್ಯಸ್ಥಿಕೆಗೆ ಸಹಕರಿಸಲಿದೆ: ಅಮೆರಿಕಾ ಉಪಾಧ್ಯಕ್ಷ

Guruprasad Narayana
ನ್ಯೂಯಾರ್ಕ್: ನೂತನವಾಗಿ ಆಯ್ಕೆಯಾಗಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಅದ್ಭುತ ವ್ಯವಹಾರ ಕೌಶಲ್ಯದಿಂದ ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಿ, ಅದನ್ನು ಬಗೆಹರಿಸುವ ಎಲ್ಲ ಸಾಧ್ಯತೆಗಳಿವೆ ಎಂದು ನೂತನವಾಗಿ ಆಯ್ಕೆಯಾಗಿರುವ ಅಮೆರಿಕಾ ಉಪಾಧ್ಯಕ್ಷ ಮೈಕ್ ಪೆನ್ಸ್ ಹೇಳಿದ್ದಾರೆ. 
'ಮಾಧ್ಯಮದೊಂದಿಗೆ ಭೇಟಿ' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪೆನ್ಸ್, ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆದಾರನ ಪಾತ್ರವನ್ನು ಟ್ರಂಪ್ ವಹಿಸಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ "ನೀವು ವಿಶ್ವದಲ್ಲಿ ಬಹಳ ಶಕ್ತಿಯುತ ಅಧ್ಯಕ್ಷನನ್ನು ನೋಡಲಿದ್ದೀರಿ, ವಿಶ್ವದ ತೊಂದರೆಗಳನ್ನು ಪರಿಹರಿಸಿ, ಉದ್ವಿಘ್ನತೆಯನ್ನು ತಗ್ಗಿಸಲು ಅವರ ವ್ಯವಹಾರ ಚತುರ ಕೌಶಲ್ಯವನ್ನು ಬಳಸಿಕೊಳ್ಳಲಿದ್ದಾರೆ" ಎಂದು ಉತ್ತರಿಸಿದ್ದಾರೆ.
ಟ್ರಂಪ್ ಅವರು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ "ಅವರು ಕೇಳುವ ಯಾವುದೇ ಪ್ರಮುಖ ಪಾತ್ರವನ್ನು ವಹಿಸಿಕೊಳ್ಳುತ್ತೇನೆ" ಎಂದು ಹೇಳಿದ್ದರ ಬಗ್ಗೆಯೂ ಪೆನ್ಸ್ ಅವರಿಗೆ ಪ್ರತಿಕ್ರಿಯಿಸಲು ಒತ್ತಾಯಿಸಲಾಯಿತು ಎಂದು ಸಿ ಎನ್ ಎನ್ ವರದಿ ಮಾಡಿದೆ. 
ಇದು ನವದೆಹಲಿಯಲ್ಲಿ ನಾಯಕರ ಹುಬ್ಬೇರಿಸಿತ್ತು, ಏಕೆಂದರೆ ಪಾಕಿಸ್ತಾನದ ಜೊತೆಗಿನ ಕಾಶ್ಮೀರದ ವಿಷಯದಲ್ಲಿ ಸ್ವಾಯತ್ತತೆಯನ್ನು ಎತ್ತಿಹಿಡಿದಿರುವ ಭಾರತ ಎಂದಿಗೂ ಅಮೆರಿಕಾದ ಮಧ್ಯಸ್ಥಿಕೆಯನ್ನು ಕೋರಿಲ್ಲ. 
"ಸರಿ, ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಘ್ನತೆ ಹೆಚ್ಚಿದೆ. ಇದು ಕಾಶ್ಮೀರದಲ್ಲಿ ಹಿಂಸೆಗೆ ಕಾರಣವಾಗಿದೆ. ಆದುದರಿಂದ ನೂತನ ಅಧ್ಯಕ್ಷ ಎರಡು ದೇಶದ ನಾಯಕರೊಂದಿಗೆ ಮಾತುಕತೆ ನಡೆಸುವ ಆಸಕ್ತಿ ತೋರಿದ್ದಾರೆ ಎಂದು ನಂಬಿದ್ದೇನೆ ಮತ್ತು ಎರಡು ದೇಶಗಳು ಅಮೆರಿಕಾ ಜೊತೆಗಿನ ಸಂಬಂಧ ವೃದ್ಧಿಸಿಕೊಳ್ಳಲು ಬಯಸಿವೆ" ಎಂದು ಪೆನ್ಸ್ ಉತ್ತರಿಸಿದ್ದಾರೆ. 
ಭಾರತ ಮತ್ತು ಪಾಕಿಸ್ತಾನವನ್ನು ಅಣ್ವಸ್ತ್ರ ಶಸ್ತ್ರಾಸ್ತ ಸಜ್ಜಿತ ರಾಷ್ಟ್ರಗಳು ಎಂಬುದನ್ನು ಟ್ರಂಪ್ ಗುರುತಿಸಿದ್ದು, ಆ ಭಾಗದಲ್ಲಿ ಶಾಂತಿ ಮತ್ತು ಭದ್ರತೆಗೆ ಅಮೆರಿಕಾ ಸದಾ ಬಯಸಿ ಮಾತುಕತೆಯಲ್ಲಿ ನಿರತವಾಗಿರುತ್ತದೆ ಎಂದು ಕೂಡ ಪೆನ್ಸ್ ಹೇಳಿದ್ದಾರೆ. 
SCROLL FOR NEXT