ಪ್ರಧಾನ ಸುದ್ದಿ

ಅಂತಿಮ ಯಾತ್ರೆಯಲ್ಲೂ ಜಯಾಗೆ ತಮ್ಮ ನೆಚ್ಚಿನ ಹಸಿರು ಬಣ್ಣದ ಸೀರೆ

Lingaraj Badiger
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಅಂತಿಮ ಯಾತ್ರೆಯಲ್ಲೂ ತಮ್ಮ ಅದೃಷ್ಟದ ಹಾಗೂ ಅಚ್ಚುಮೆಚ್ಚಿನ ಹಸಿರು ಬಣ್ಣದ ಸೀರೆ ಧರಿಸಿದ್ದರು.
ಇಂದು ಬೆಳಗಿನ ಜಾವ ಮುಖ್ಯಮಂತ್ರಿಗಳ ಪೋಯಸ್ ಗಾರ್ಡನ್ ನಿವಾಸದಿಂದ ರಾಜಾಜಿ ಹಾಲ್ ಗೆ ಜಯಲಲಿತಾ ಅವರ ಪಾರ್ಥಿವ ಶರೀರ ಕೊಂಡೊಯ್ಯುವಾಗ ಕೆಂಪು ಬಾರ್ಡರ್ ನ ಹಸಿರು ಬಣ್ಣದ ಸೀರೆ ಉಡಿಸಲಾಗಿತ್ತು.
ಜಯಲಲಿತಾ ಅವರಿಗೆ ಹಸಿರು ಬಣ್ಣದ ಸೀರೆ ಎಂದರೆ ತುಂಬಾ ಅಚ್ಚುಮೆಚ್ಚು. ಹೀಗಾಗಿ ಅವರು ಆರು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗಲೂ ಹಸಿರು ಬಣ್ಣದ ಸೀರೆಯನ್ನೇ ಧರಿಸಿದ್ದರು.
ಅಕ್ರಮ ಆಸ್ತಿ ಗಳಿಕ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನಿಂದ ಕ್ಲೀನ್ ಚಿಟ್ ಪಡೆದ ನಂತರ ಮತ್ತೆ ಮೇ 23ರಂದು ಐದನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗಲೂ ಜಯಲಲಿತಾ ಇದೇ ಹಸಿರು ಬಣ್ಣದ ಸೀರೆ ಧರಿಸಿದ್ದರು.
ಎಐಎಡಿಎಂಕೆ ಕಾರ್ಯಕರ್ತರ ಪ್ರಕಾರ, ಜಯಲಲಿತಾ ಅವರಿಗೆ ಹಸಿರು ಬಣ್ಣ ಅತಿ ನೆಚ್ಚಿನ ಹಾಗೂ ಅದೃಷ್ಟದ ಬಣ್ಣ. ಹೀಗಾಗಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಹಸಿರು ಬಣ್ಣದ ಪೆನ್ ನಿಂದಲೇ ಸಹಿ ಹಾಕುತ್ತಿದ್ದರು. ಅಲ್ಲದೆ ಅವರ ರಿಂಗ್ ನಲ್ಲೂ ಹಸಿರು ಬಣ್ಣದ ಹರಳು ಇತ್ತು ಎಂದಿದ್ದಾರೆ.
SCROLL FOR NEXT