ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಕೋಲ್ಕತ್ತಾ: ಪ್ರತಿ ನಡೆಯಲ್ಲಿಯೂ ಮಾನವೀಯತೆ ಮೆರೆಯುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಜನರಿಗೆ ಕರೆ ನೀಡಿದ್ದಾರೆ.
"ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯಾದ ಇಂದು (ಡಿಸೆಂಬರ್ ೧೦) ವಿಶ್ವದಾದ್ಯಂತ ನಮ್ಮ ಸೋದರ ಮತ್ತು ಸೋದರಿಯರ ಹಕ್ಕುಗಳ ಜೊತೆಗೆ ನಿಲ್ಲುವ ಪಣ ತೊಡೋಣ. ಎಲ್ಲ ನಡೆಗಳಲ್ಲೂ ಮಾನವೀಯತೆ ತೋರಿಸಿ" ಎಂದು ಮಮತಾ ಟ್ವೀಟ್ ಮಾಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಕೂಡ ಆಗಿರುವ ಮಮತಾ, ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆದಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕೂಡ ಸಮರ ಸಾರಿದ್ದಾರೆ.
ನವೆಂಬರ್ ೮ ರ ನಿರ್ಧಾರದಿಂದ ಈಗಾಗಲೇ ೯೦ ಜನ ಮೃತಪಟ್ಟಿದ್ದು, ಇದನ್ನು ಕೂಡಲೇ ಹಿಂಪಡೆಯಬೇಕು ಎಂದು ಕೂಡ ಅವರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics