ಇಸ್ಲಮಾಬಾದ್: ಭಾರತ ಅಟಾಮಿಕ್ ಸಬ್ ಮೆರೀನ್ ಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಹೆಚ್ಚುವರಿ ಕಾರ್ಯದರ್ಶಿ ತಾಸ್ನಿಂ ಅಸ್ಲಮ್ ಹೇಳಿರುವುದಾಗಿ ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.
ಇಸ್ಲಾಮಾಬಾದ್ ನಲ್ಲಿ ಉಪನ್ಯಾಸವೊಂದನ್ನು ನೀಡುವ ವೇಳೆಯಲ್ಲಿ ಭಾರತ ದಿನದಿಂದ ದಿನಕ್ಕೆ ಅಟಾಮಿಕ್ ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಕೊಳ್ಳುತ್ತಿರುವುದಾಗಿ ಅಸ್ಲಮ್ ಹೇಳಿದ್ದಾರೆ ಎನ್ನಲಾಗಿದೆ.
"ಇಂತಹ ಪರಿಸ್ಥಿಯಲ್ಲಿ, ತನ್ನ ರಕ್ಷಣೆಗಾಗಿ ಪಾಕಿಸ್ತಾನ ಸನ್ನದ್ಧವಾಗದೆ ಬೇರೆ ಮಾರ್ಗವಿಲ್ಲ" ಎಂದು ಕೂಡ ಅವರು ಹೇಳಿದ್ದು ಭಾರತದ ನಾಯಕರು ನೀಡುತ್ತಿರುವ 'ಬೇಜವಾಬ್ದಾರಿ ಹೇಳಿಕೆಗಳು' ಪ್ರಾದೇಶಿಕ ಶಾಂತಿಗೆ ಮಾರಕ ಎಂದಿದ್ದಾರೆ.
ಅಣುಶಸ್ತ್ರಾಸ್ತ್ರ ಸರಬರಾಜುದಾರ ಗುಂಪಿಗೆ ಭಾರತಕ್ಕೆ ಸದಸ್ಯತ್ವ ನೀಡಿದರೆ ಈ ಪ್ರದೇಶದಲ್ಲಿ ರಾಜಕೀಯ ಶಕ್ತಿಯ ಸ್ಥಿರತೆಯನ್ನು ಅಸ್ಥಿರಗೊಳಿಸಲಿದೆ ಎಂದು ಕೂಡ ಅವರು ಹೇಳಿದ್ದಾರೆ.