ನವದೆಹಲಿ: ಗಡ್ಡ ಬೆಳೆಸಲು ಅವಕಾಶ ಕೋರಿ ಇಬ್ಬರು ಐ ಎ ಎಫ್ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ವೈಯಕ್ತಿಕ ನೋಟ ಮತ್ತು ಶೈಲಿಯ ಬಗ್ಗೆ ಇರುವ ಐ ಎ ಎಫ್ ನೀತಿಗಳು ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ ಎಂದಿದೆ.
ಮೊಹಮದ್ ಜುಬೈರ್ ಮತ್ತು ಅನ್ಸಾರಿ ಆಫ್ತಾಬ್ ಅಹ್ಮದ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ, ನ್ಯಾಯಾಧೀಶ ಟಿ ಎಸ ಠಾಕೂರ್, ನ್ಯಾಯಾಧೀಶ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಾಧೀಶ ಎಲ್ ನಾಗೇಶ್ವರ ರಾವ್ ಇವರುಗಳನ್ನು ಒಳಗೊಂಡ ಪೀಠ "ವೈಯಕ್ತಿಕ ನೋಟ ಮತ್ತು ಶೈಲಿಯ ಬಗ್ಗೆ ಇರುವ ಐ ಎ ಎಫ್ ನೀತಿಗಳು ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ ಮತ್ತು ಅಂತಹ ಆಶಯ ಕೂಡ ಅವಕ್ಕಿಲ್ಲ.
"ಅವರ (ನೀತಿಗಳು ಮತ್ತು ನಿಯಮಗಳು) ಎಲ್ಲರ ಏಕರೂಪತೆ, ಶಿಸ್ತು ಮತ್ತು ಕ್ರಮವನ್ನು ಬಯಸುತ್ತವೆ, ಇದು ವಾಯುಪಡೆಗೆ ಅವಶ್ಯಕ ಕೂಡ ಮತ್ತು ಇತರ ಸೇನಾ ಪಡೆಗಳಿಗೂ" ಎಂದು ಪೀಠ ಆದೇಶ ನೀಡಿದೆ.
ತಾವು ಮುಸ್ಲಿಂ ಸಮುದಾಯಕ್ಕೆ ಸೇರಿದವರಾದ್ದರಿಂದ, ಧಾರ್ಮಿಕ ನೆಲೆಯ ಮೇಲೆ ತಮಗೆ ಗಡ್ಡ ಬೆಳೆಸಲು ಜುಬೈರ್ ಅವಕಾಶ ಕೋರಿದ್ದನ್ನು ಭಾರತೀಯ ವಾಯು ಪಡೆ(ಐ ಎ ಎಫ್) ತಿರಸ್ಕರಿಸಿತ್ತು.
ಜುಬೈರ್ ಅವರು ಈ ಮನವಿಯನ್ನು ಜನವರಿ ೧೦, ೨೦೦೫ ರಂದು ಸಲ್ಲಸಿದ್ದರು ಮತ್ತು ಅದರ ಮುಂದಿನ ತಿಂಗಳೇ ಹಿರಿಯ ಅಧಿಕಾರಿ ಇದನ್ನು ತಿರಸ್ಕರಿಸಿದ್ದರು.