ಕಾವೇರಿ ನದಿ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಎಲ್ಲ ಜಲವಿವಾದಗಳಿಗೆ ಒಂದೇ ನ್ಯಾಯಾಧಿಕರಣ; ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

ಮಹತ್ವದ ಬೆಳವಣಿಗೆಯೊಂದರಲ್ಲಿ ಅಂತರರಾಜ್ಯ ಜಲವಿವಾದಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಒಂದೇ ನ್ಯಾಯಾಧಿಕರಣ ಸ್ಥಾಪಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಅಂತರರಾಜ್ಯ ಜಲವಿವಾದಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಒಂದೇ ನ್ಯಾಯಾಧಿಕರಣ ಸ್ಥಾಪಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಇರುವ ಒಂದೊಂದು ಅಂತಾರಾಜ್ಯ ನದಿ ನೀರು ಹಂಚಿಕೆ ಬಿಕ್ಕಟ್ಟಿಗೆ ಒಂದೊಂದು ನ್ಯಾಯಾಧಿಕರಣಗಳಿದ್ದು, ಈ ಎಲ್ಲ ನ್ಯಾಯಾಧಿಕಣಗಳನ್ನು ಒಂದೇ ನ್ಯಾಯಾಧಿಕರಣದ ಅಡಿಗೆ ತಂದು ಎಲ್ಲವನ್ನೂ ವಿಲೀನಗೊಳಿಸಲು  ಕೇಂದ್ರ ಸರ್ಕಾರ ಕಳೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿತ್ತು.  ಹೀಗಾಗಿ ನದಿ ವ್ಯಾಜ್ಯಗಳ ಕಾಯ್ದೆ-1956ಕ್ಕೆ ತಿದ್ದುಪಡಿ ತರಲು ಒಪ್ಪಿಗೆ ಸೂಚಿಸಲಾಗಿತ್ತು. ಅಂತೆಯೇ ಜನವರಿಯಲ್ಲಿ ಆರಂಭವಾಗುವ ಬಜೆಟ್‌ ಅಧಿವೇಶನದಲ್ಲಿ  ಇದನ್ನು ಮಂಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ನದಿ ವ್ಯಾಜ್ಯ ನಿರ್ಣಯ ಸಮಿತಿ (Dispute Resolution Committee-DRC)ಯನ್ನು ಕೂಡ ರಚನೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ವಿವಾದ ಸಂಬಂಧ ನಿರ್ಣಯ ಕೈಗೊಳ್ಳಲು ಈ ಸಮಿತಿ  ನೆರವಾಗಲಿದೆ. ಬಹುತೇಕ ಎಲ್ಲ ನದಿ ವ್ಯಾಜ್ಯಗಳನ್ನು ಡಿಆರ್ ಸಿಯಲ್ಲೇ ಪರಿಹರಿಸಲು ಪ್ರಯತ್ನಿಸಲಾಗುತ್ತದೆ. ಒಂದು ವೇಳೆ ಡಿಆರ್ ಸಿ ನಿರ್ಣಯದಿಂದ ರಾಜ್ಯಗಳು ಸಂತೃಪ್ತರಾಗದಿದ್ದಲ್ಲಿ ಮಾತ್ರ ನ್ಯಾಯಾಧಿಕರಣದ  ಮೆಟ್ಟೇಲೇರಬಹುದಾಗಿದೆ.

ಪ್ರಸ್ತಾವಿತ ತಿದ್ದುಪಡಿ ಕಾಯ್ದೆಯಡಿ 2 ವರ್ಷದೊಳಗೆ ನದಿ ವಿವಾದ ಇತ್ಯರ್ಥಗೊಳಿಸುವ ಗಡುವು ವಿಧಿಸಲಾಗಿದ್ದು, ಈಗಿರುವ ಕಾಯ್ದೆಯಲ್ಲಿ 3 ವರ್ಷದೊಳಗೆ ತೀರ್ಪು ಕೊಡಬೇಕು. ಆಗದಿದ್ದರೆ ವಿಸ್ತರಣೆಗೆ ಅರ್ಜಿ ಸಲ್ಲಿಸಬೇಕು ಎಂಬ  ನಿಯಮವಿದೆ. ಈ ವರೆಗೆ ಕಾವೇರಿ ನ್ಯಾಯಾಧಿಕರಣ, ಮಹದಾಯಿ ನ್ಯಾಯಾಧಿಕರಣ, ಕೃಷ್ಣಾ ನ್ಯಾಯಾಧಿಕರಣ ಸೇರಿ ವಿವಿಧ 8 ನ್ಯಾಯಾಧಿಕರಣಗಳು ರಚಿತವಾಗಿವೆ. ಯಾವುದಾದರೂ ರಾಜ್ಯವೊಂದು ಅಂತಾರಾಜ್ಯ ನದಿ ವಿವಾದ  ಮಾತುಕತೆಯಲ್ಲಿ ಇತ್ಯರ್ಥವಾಗಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೆ, ಸರ್ಕಾರವು ನ್ಯಾಯಾಧಿಕರಣ ರಚಿಸುವ ಅಧಿಕಾರ ಹೊಂದಿದೆ.

ಈ ಬಗ್ಗೆ ಮಾತನಾಡಿರುವ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಕಾರ್ಯದರ್ಶಿ ಶಶಿ ಶೇಖರ್ ಅವರು, ಅಂತಾರಾಜ್ಯ ಜಲ ವ್ಯಾಜ್ಯಗಳನ್ನು ಪರಿಷ್ಕರಣೆಗಾಗಿ ಇನ್ನು ಮುಂದೆ ಒಂದೇ ನ್ಯಾಯಾಧಿಕರಣವಿರಲಿದೆ. ಈ  ನ್ಯಾಯಾಧಿಕರಣದ ಅಡಿಯಲ್ಲೇ ಎಲ್ಲ ರಾಜ್ಯಗಳ ನದಿ ವ್ಯಾಜ್ಯೆಗಳ ವಿಚಾರಣೆ ನಡೆಯಲಿದೆ. ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರ ಈ ನ್ಯಾಯಾಧಿರಣದ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವೈಟ್​ಫೀಲ್ಡ್ ಠಾಣೆಯಲ್ಲ 'ಡಾರ್ಕ್' ಫೀಲ್ಡ್ ಠಾಣೆ: ಕಾನೂನು ಬಾಹಿರವಾಗಿ ವ್ಯಕ್ತಿ ಬಂಧನ ಸಂಬಂಧ ACP, DCP ವಿರುದ್ದ ಜಡ್ಜ್ ಗರಂ, Video!

CM ಡಿಕೆಶಿ ಬಾಲ್ಯ ಸ್ನೇಹಿತ, ನಟ ರವಿಚಂದ್ರನ್‌ಗೆ MLC ಸ್ಥಾನ? ರಾಜಕೀಯ ಅಖಾಡಕ್ಕೆ ‘ಕ್ರೇಜಿ ಸ್ಟಾರ್’ ಎಂಟ್ರಿ ಸಾಧ್ಯತೆ

ಮಳೆ ಕೊರತೆ ನೀಗಿಸಲು ರಾಜ್ಯ ಸರ್ಕಾರದ ಮಾಸ್ಟರ್ ಪ್ಲ್ಯಾನ್; Cloud seeding ಗೆ ಎರಡು ಸಮಿತಿಗಳ ರಚನೆ

ಹೈಕೋರ್ಟ್ ಆದೇಶ ಉಲ್ಲಂಘನೆ: ಮಮತಾ ವಿರುದ್ಧ ಸ್ವಯಂಪ್ರೇರಿತವಾಗಿ FIR ದಾಖಲಿಸಿದ ಪೊಲೀಸರು; ಮಾಜಿ CMಗೆ ಬಿಗ್ ಶಾಕ್!

ಮನುಕುಲಕ್ಕೆ ಎಚ್ಚರಿಕೆಗಾಗಿ ಟೈಮ್ ಟ್ರಾವಲ್! 2022 ರಲ್ಲಿ ಬಂದ ChatGPT ಬಳಸದಂತೆ 2012 ರಲ್ಲೇ ಜನರಿಗೆ ಕರೆ ನೀಡಿದ್ದ ಪೋಸ್ಟ್ ವೈರಲ್!