ನವದೆಹಲಿ: ಡಿಸೆಂಬರ್ ೩೦ ರವರೆಗಷ್ಟೇ ಅಲ್ಲ, ಅದರ ನಂತರಕ್ಕೂ ಬೇಕಾಗುವಷ್ಟು ಅಗತ್ಯವಾದ ನಗದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಳಿಯಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
"ಆರ್ ಬಿ ಐ ಬಳಿ ಅಗತ್ಯವಾದ ನಗದು ಇದೆ, ಡಿಸೆಂಬರ್ ೩೦ ರವರೆಗಷ್ಟೇ ಅಲ್ಲ, ಅದರ ನಂತರಕ್ಕೂ" ಎಂದು ಮಾಧ್ಯಮಗಳಿಗೆ ನಗದು ಜಮಾ ಮಾಡುವುದರ ಬಗ್ಗೆ ಸ್ಪಷ್ಟೀಕರಣ ನೀಡುವಾಗ ಜೇಟ್ಲಿ ಹೇಳಿದ್ದಾರೆ.
ನೋಟು ರದ್ದತಿ ಕ್ರಮಕ್ಕೆ ಸರಿಯಾಗಿ ಸಿದ್ಧತೆ ಮಾಡಿಕೊಳ್ಳದಿರುವುದರ ಬಗ್ಗೆ ಜೇಟ್ಲಿ ಪ್ರತಿಕ್ರಿಯಿಸಿದ್ದು "ಸಂಪೂರ್ಣ ಸಿದ್ಧತೆ ಇತ್ತು. ಒಂದು ದಿನ ಕೂಡ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಅಗತ್ಯವಾದ ನಗದು ಪೂರೈಸುವಲ್ಲಿ ಆರ್ ಬಿ ಐ ವಿಫಲವಾಗಿಲ್ಲ.
"ಪ್ರತಿದಿನ ನೋಟುಗಳ ಒಂದು ನಿರ್ಧಿಷ್ಟ ಮೊತ್ತವನ್ನು ಬಿಡುಗಡೆ ಮಾಡಬೇಕಿತ್ತು. ಅದಕ್ಕಾಗಿ ಎಲ್ಲ ಸಿದ್ಧತೆಯು ಮಾಡಿಕೊಳ್ಳಲಾಗಿತ್ತು. ಆದುದರಿಂದ, ಮೊದಲೇ ಮುದ್ರಿಸಿದ ಮತ್ತು ಸದರಿ ಮುದ್ರಿಸುತ್ತಿರುವ ನೋಟುಗಳನ್ನು ಒಳಗೊಂಡಂತೆ ನಗದು ದಾಸ್ತಾನನ್ನು ಕಾಪಾಡಿಕೊಂಡಿದ್ದೇವೆ" ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics