ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಭುವನೇಶ್ವರ ಬಂದ್: ಬಿಜೆಪಿ-ಬಿಜೆಡಿ ಕಾರ್ಯಕರ್ತರ ನಡುವೆ ಮಾರಾಮಾರಿ

ಕೊಲೆ ಪ್ರಕರಣ ಮತ್ತು ಸೆಕ್ಸ್ ವಿಡಿಯೋದಲ್ಲಿ ಭುವನೇಶ್ವರ ಮೇಯರ್ ಅನಂತ ನಾರಾಯಣ ಜೇನ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಭಾರತೀಯ ಜನತಾ ಪಕ್ಷ

ಸಾಂದರ್ಭಿಕ ಚಿತ್ರ
Guruprasad Narayana
Updated On : 21 Dec 2016, 1:48 am
ಭುವನೇಶ್ವರ: ಕೊಲೆ ಪ್ರಕರಣ ಮತ್ತು ಸೆಕ್ಸ್ ವಿಡಿಯೋದಲ್ಲಿ ಭುವನೇಶ್ವರ ಮೇಯರ್ ಅನಂತ ನಾರಾಯಣ ಜೇನ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಭಾರತೀಯ ಜನತಾ ಪಕ್ಷ ಕರೆದಿದ್ದ ೧೨ ಘಂಟೆಗಳ ಬಂದ್ ದಿನವಾದ ಬುಧವಾರ ಬಿಜೆಪಿ ಮತ್ತು ಬಿಜೆಡಿ (ಬಿಜು ಜನತಾ ದಳ) ಕಾರ್ಯಕರ್ತರ ನಡುವೆ ಘರ್ಷಣೆಗೆ ಎಡೆಮಾಡಿಕೊಟ್ಟಿದೆ. 
ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿ ರಸ್ತೆಗಳಲ್ಲಿ ವಾಹನ ಓಡಾಟಕ್ಕೆ ತಡೆ ಒಡ್ಡಿದ್ದರಿಂದ ಒರಿಸ್ಸಾದ ರಾಜಧಾನಿಯಲ್ಲಿ ಸಾಮಾನ್ಯ ಜನಜೀವನ ಸ್ಥಬ್ದವಾಗಿತ್ತು.  
ಇದೆ ಸಮಯದಲ್ಲಿ ಬಿಜೆಡಿ ವಿದ್ಯಾರ್ಥಿ ಸಂಘಟನೆ ಬಂದ್ ವಿರೋಧಿಸಿ ವಾಣಿ ವಿಹಾರ್ ನಿಂದ ಮಾಸ್ಟರ್ ಕ್ಯಾಂಟೀನ್ ವರೆಗೆ ಬೈಕ್ ರ್ಯಾಲಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Advertisement

Advertisement

"ನಾವು ಶಾಂತಿಯುತವಾಗಿ ಭುವನೇಶ್ವರದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೆವು. ಆದರೆ, ಪೊಲೀಸರು ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಬಿಜೆಡಿಗೆ ಪಕ್ಷಕ್ಕೆ ರ್ಯಾಲಿ ನಡೆಸಲು ಅವಕಾಶ ನೀಡಿತು. ಇದು ಮುಖ್ಯಮಂತ್ರಿ ನವೀನ್ ಪಟ್ಟನಾಯಕ್ ಅವರ ಹುನ್ನಾರ" ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಹರಿಚಂದನ್ ಹೇಳಿದ್ದಾರೆ. 
ಆಗ ಎರಡು ಪಕ್ಷಗಳ ಕಾರ್ಯಕರ್ತರು ಪೊಲೀಸರ ಉಪಸ್ಥಿತಿಯಲ್ಲೇ ಘರ್ಷಣೆಗೆ ಇಳಿದಿದ್ದಾರೆ. 
"ನಾವು ಬಂದ್ ವಿರೋಧಿಸಿದೆವು ಮತ್ತು ಖಾಸಗಿ ಸಂಸ್ಥೆಗಳು ಹಾಗು ಅಂಗಡಿಗಳನ್ನು ತೆರೆಯಲು ಮನವಿ ಮಾಡಿದೆವು" ಎಂದು ಬಿಜೆಡಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಚಿನ್ಮಯ್ ಸಾಹು ಹೇಳಿದ್ದಾರೆ.
ಈ ಘಟನೆಯ ನಂತರ ಪೊಲೀಸರು ಹಲವು ಬಿಜೆಪಿ ನಾಯಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ಭುವನೇಶ್ವರ್ ಡಿಸಿಪಿ ಸತ್ಯಬ್ರತ ಭೋಯಿ ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments