ಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ 
ಪ್ರಧಾನ ಸುದ್ದಿ

ಮಸೀದಿ ಧ್ವಂಸ ವಿರೋಧ ಪ್ರಕರಣದಲ್ಲಿ ಒವೈಸಿ ಸಹೋದರರು ಖುಲಾಸೆ

೧೧ ವರ್ಷಗಳ ಹಿಂದೆ ಮಸೀದಿಯೊಂದ ಧ್ವಂಸಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಮತ್ತು ಅವರ ಸಹೋದರನನ್ನು ಒಳಗೊಂಡ ಅವರ ಪಕ್ಷದ

ಹೈದರಾಬಾದ್: ೧೧ ವರ್ಷಗಳ ಹಿಂದೆ ಮಸೀದಿಯೊಂದ ಧ್ವಂಸಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಮತ್ತು ಅವರ ಸಹೋದರನನ್ನು ಒಳಗೊಂಡ ಅವರ ಪಕ್ಷದ ನಾಲ್ಕು ಜನ ಶಾಸಕರನ್ನು ಗುರುವಾರ ತೆಲಂಗಾಣ ಕೋರ್ಟ್ ಖುಲಾಸೆ ಮಾಡಿದೆ. 
ಸಂಗಾರೆಡ್ಡಿ ಪಟ್ಟಣದ ಕೋರ್ಟ್, ಹೈದರಾಬಾದ್ ಸಂಸದ ಮತ್ತು ಅಖಿಲ ಭಾರತ ಮಜಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ನಾಲ್ವರು ಶಾಸಕರನ್ನು ಖುಲಾಸೆ ಮಾಡಿದೆ. 
ಮುತ್ತಂಗಿ ಗ್ರಾಮದ ಬಳಿ ರಸ್ತೆ ವಿಸ್ತರಣೆಗಾಗಿ ಮಸೀದಿ ಒಡೆಯುವ ಸಂದರ್ಭದಲ್ಲಿ ಅದಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಅಸಾದುದ್ದೀನ್ ಒವೈಸಿ, ಸಹೋದರ ಅಕ್ಬರುದ್ದೀನ್ ಒವೈಸಿ, ಅಹ್ಮದ್ ಪಾಶ ಖಾದ್ರಿ, ಮುಮ್ತಾಜ್ ಅಹ್ಮದ್ ಖಾನ್ ಮತ್ತು ಮುಅಜ್ಜಯಮ್ ಖಾನ್ ವಿರುದ್ಧ ಮಾರ್ಚ್ ೧೬, ೨೦೦೫ ರಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 
ಅಸಾದುದ್ದೀನ್ ಒವೈಸಿ ಜನವರಿ ೨೧, ೨೦೧೩ ರಂದು ಕೋರ್ಟ್ ನಲ್ಲಿ ಶರಣಾಗತರಾಗಿದ್ದರು ಮತ್ತು ಅವರ ಜಾಮೀನುರಹಿತ ವಾರಂಟ್ ಅನ್ನು ರದ್ದು ಮಾಡಲು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿ ಕೋರ್ಟ್ ಅವರನ್ನು ಜೈಲಿಗೆ ಕಳುಹಿಸಿತ್ತು. 
ನಂತರ ಈ ಪ್ರಕರಣದಲ್ಲಿ ಎಐಎಂಐಎಂ ಅಧ್ಯಕ್ಷರಿಗೆ ಜಾಮೀನು ನೀಡಲಾಗಿತ್ತು. 
ಈಗ ಗುರುವಾರದ ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಅಸಾದುದ್ದೀನ್ ಒವೈಸಿ, ಆಂಧ್ರ ಹೋಳಾಗುವುದಕ್ಕೂ ಮುಂಚಿತವಾಗಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಈಗ ಕ್ಷಮೆ ಕೊರಳು ಸಿದ್ಧವಿದೆಯೇ ಎಂದು ಪ್ರಶ್ನಿಸಿದ್ದಾರೆ. 
ಕಾನೂನು ಕ್ರಮವನ್ನು ಪಾಲಿಸದೆ ಮಸೀದಿಯನ್ನಿ ಧ್ವಂಸಗೊಳಿಸಲಾಗಿತ್ತು ಎಂದು ಕೂಡ ಅಸಾದುದ್ದೀನ್ ಟ್ವೀಟ್ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video