ಮಮತಾ ಬ್ಯಾನರ್ಜಿ - ನರೇಂದ್ರ ಮೋದಿ 
ಪ್ರಧಾನ ಸುದ್ದಿ

ಸಾರ್ವಜನಿಕರು ನಿಮ್ಮ ಸರ್ಕಾರದ ಭಿಕ್ಷುಕರಲ್ಲ: ಮೋದಿ ಮೇಲೆ ದೀದಿ ಮತ್ತೆ ವಾಗ್ದಾಳಿ

ನಗದು ಹಿಂಪಡೆತ ಮಿತಿಯ ಕೇಂದ್ರ ಸರ್ಕಾರದ ನಿರ್ಬಂಧದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೋಲ್ಕತ್ತಾ: ನಗದು ಹಿಂಪಡೆತ ಮಿತಿಯ ಕೇಂದ್ರ ಸರ್ಕಾರದ ನಿರ್ಬಂಧದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. 
"ಮೋದಿ ಬಾಬು, ಸಾರ್ವಜನಿಕರು ನಿಮ್ಮ ಸರ್ಕಾರದ ಭಿಕ್ಷುಕರಲ್ಲ. ನಗದು ಹಿಂಪಡೆತದ ಮೇಲೆ ನಿರ್ಬಂಧವಿರುವುದೇಕೆ? ೫೦ ದಿನಗಳು ಮುಗಿದಿವೆ. ಜನರು ಕಷ್ಟ ಪಟ್ಟು ದುಡಿದ ಹಣವನ್ನು ಹಿಂಪಡೆದುಕೊಳ್ಳುವ ಹಕ್ಕನ್ನು ನಾಗರಿಕರಿಂದ ಕಿತ್ತುಕೊಂಡಿರುವುದು ಏಕೆ?" ಎಂದು ಅವರು ಟ್ವೀಟ್ ಮಾಡಿದ್ದಾರೆ.
ನವೆಂಬರ್ ೮ ರಂದು ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ನಿರ್ಧಾರ ಘೋಷಿಸಿದ್ದ ಮೋದಿ, ಸಹಜ ಸ್ಥಿತಿಗೆ ಮರಳಿಸಲು ೫೦ ದಿನಗಳ ಸಮಯಾವಕಾಶ ಕೋರಿದ್ದರು. 
"ಸರ್ಕಾರಗಳು ಅಧಿಕಾರಕ್ಕೆ ಬರಬಹುದು ಆದರೆ ಜನರ ಆರ್ಥಿಕ ಹಕ್ಕುಗಳನ್ನು ಕಸಿದುಕೊಳ್ಳುವ ಅಧಿಕಾರ ಅವರಿಗಿಲ್ಲ" ಎಂದು ಮಮತಾ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್