ವಾತ್ಸಲ್ಯ ಸಿಂಗ್ ಚೌಹಾಣ್ 
ಪ್ರಧಾನ ಸುದ್ದಿ

ನನಗೆ 1 ಕೋಟಿ ರು.ಕೆಲಸ ಸಿಕ್ಕಿದೆ ಅಂದ್ರೆ ನನ್ನ ಕುಟುಂಬ ನಂಬುತ್ತಿಲ್ಲ: ಬಿಹಾರ ವೆಲ್ಡರ್ ಪುತ್ರ

ನನಗೆ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಒಂದು ಕೋಟಿ ರುಪಾಯಿ ಸಂಬಳದ ಕೆಲಸ ಸಿಕ್ಕಿದೆ ಎಂದು ಹೇಳಿದರೆ ಮೊದಲು ನನ್ನ ಕುಟುಂಬ ನಂಬಲಿಲ್ಲ ಎಂದು ಖರಗ್​ಪುರ್...

ಖರಗ್​ಪುರ್: ನನಗೆ  ಮೈಕ್ರೋಸಾಫ್ಟ್ ಕಂಪನಿಯಲ್ಲಿ ಒಂದು ಕೋಟಿ ರುಪಾಯಿ ಸಂಬಳದ ಕೆಲಸ ಸಿಕ್ಕಿದೆ ಎಂದು ಹೇಳಿದರೆ ಮೊದಲು ನನ್ನ ಕುಟುಂಬ ನಂಬಲಿಲ್ಲ ಎಂದು ಖರಗ್​ಪುರ್ ಐಐಟಿಯ ಪ್ರತಿಭಾನ್ವಿತ ವಿದ್ಯಾರ್ಥಿ ಬಿಹಾರದ ಮೂಲದ ವಾತ್ಸಲ್ಯ ಸಿಂಗ್ ಚೌಹಾಣ್ ಅವರು ಹೇಳಿದ್ದಾರೆ.
21 ವರ್ಷದ ಚೌಹಾಣ್ ಅವರನ್ನು ಅಮೆರಿಕ ಮೂಲದ ಮೈಕ್ರೋಸಾಫ್ಟ್ ಕಂಪನಿ ವರ್ಷಕ್ಕೆ 1.2 ಕೋಟಿ ರುಪಾಯಿಗಳ ಭಾರಿ ವೇತನ ನೀಡಿ ನೇಮಕ ಮಾಡಿಕೊಂಡಿದೆ.
ವಾತ್ಸಲ್ಯನ ತಂದೆ ಚಂದ್ರಕಾಂತ್ ಸಿಂಗ್ ಸಾಮಾನ್ಯ ವೆಲ್ಡಿಂಗ್ ಶಾಪ್ ಮಾಲೀಕರಾಗಿದ್ದು, ಮೂಲತಃ ಬಿಹಾರದ ಖಗರಿಯ ಗ್ರಾಮದ ನಿವಾಸಿ. ವಾತ್ಸಲ್ಯ 2009 ರಲ್ಲಿ ನಡೆದ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೆ 382 ನೇ ರ್ಯಾಂಕ್ ಪಡೆದಿದ್ದರು.
'ನನಗೆ ಒಂದು ಕೋಟಿ ರುಪಾಯಿ ಕೆಲಸ ಸಿಕ್ಕಿದೆ ಎಂದಾಗ ಮೊದಲು ನನ್ನ ತಂದೆ ನಂಬಲಿಲ್ಲ. ಆದರೆ ಈ ಸುದ್ದಿ ಖಚಿತಪಡಿಸಿಕೊಂಡ ನಂತರವೇ ಅವರು ನನ್ನೊಂದಿಗೆ ಮಾತನಾಡಿದರು. ಅವರು ಸಾಲ ಮಾಡಿ ನನ್ನನ್ನು ಐಐಟಿಯಲ್ಲಿ ಓದಿಸಿದ್ದಾರೆ' ಎಂದು ಚೌಹಾಣ್ ತಿಳಿಸಿದ್ದಾರೆ. ಅಲ್ಲದೆ ಐದು ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ ಪಾಸಾಗುವುದು ನನಗೆ ಕಷ್ಟವೆನಿಸಲಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)