ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಇಂಟರ್ ನೆಟ್ ಸೇವೆಗಳ ದರ ವ್ಯತ್ಯಾಸವನ್ನು ತಳ್ಳಿಹಾಕಿದ ಟ್ರಾಯ್

ಭಾರತ ದೇಶದಲ್ಲಿ ಜನಸಾಮಾನ್ಯರಿಗೆ ಉಚಿತ ಇಂಟರ್ನೆಟ್ ಸೇವೆ ಒದಗಿಸುವ ಫೇಸ್ ಬುಕ್ ಕಂಪೆನಿಯ ಯೋಜನೆಗೆ ಹಿನ್ನಡೆಯುಂಟಾಗಿದ್ದು...

ಮುಂಬೈ: ಅಂತರ್ಜಾಲ ಸೇವೆಗೆ ವಿವಿಧ ದರ ನಿಗದಿಪಡಿಸುವ ಕ್ರಮವನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸೋಮವಾರ ತಳ್ಳಿಹಾಕಿದೆ. ಇದರಿಂದ, ದೇಶದಲ್ಲಿ ಜನಸಾಮಾನ್ಯರಿಗೆ ಉಚಿತ ಇಂಟರ್ನೆಟ್ ಸೇವೆ ಒದಗಿಸುವ ಫೇಸ್ ಬುಕ್ ಕಂಪೆನಿಯ ಯೋಜನೆಗೆ ಹಿನ್ನಡೆಯಾಗಿದೆ.

ಇಂಟರ್ನೆಟ್ ನಲ್ಲಿ ಎಲ್ಲಾ ವೆಬ್ ಸೈಟ್ ಗಳಿಂದ ಸಿಗುವ ಎಲ್ಲಾ ವಿಷಯಗಳು ಒಂದೇ ದರದಲ್ಲಿ ಸಿಗುವಂತಾಗಬೇಕು. ಇದರ ಉಲ್ಲಂಘನೆಯಾದರೆ ಪ್ರತಿ ದಿನಕ್ಕೆ 50 ಸಾವಿರ ರೂಪಾಯಿಯಂತೆ ದಂಡ ಕಟ್ಟಬೇಕಾಗುತ್ತದೆ ಎಂದು ಟ್ರಾಯ್ ಎಚ್ಚರಿಕೆ ನೀಡಿದೆ. ವಿವಿಧ ವೆಬ್ ಸೇವೆಗಳಿಗೆ ಬೇರೆ ಬೇರೆ ದರ ನಿಗದಿಪಡಿಸುವ ಮೂಲಕ ತಾರತಮ್ಯ ತೋರಬಾರದು ಎಂದು ಟ್ರಾಯ್ ಹೇಳಿದೆ.

ಫೇಸ್ ಬುಕ್  ಭಾರತದಲ್ಲಿ ರಿಲಯನ್ಸ್ ಟೆಲಿಕಾಂ ಕಂಪೆನಿ ಜೊತೆ ಸೇರಿ ಮೊಬೈಲ್ ಫೋನ್ ಗಳಲ್ಲಿ, ಫೇಸ್ ಬುಕ್ ಸಾಮಾಜಿಕ ಜಾಲತಾಣದ ಉಚಿತ ಬಳಕೆಯನ್ನು ಜನಸಾಮಾನ್ಯರಿಗೆ ನೀಡಲು ಯೋಜನೆ ಹಾಕಿಕೊಂಡಿತ್ತು.

ಟ್ರಾಯ್, ಕೆಲವು ವಾರಗಳ ಫ್ರೀ ಬೇಸಿಕ್ಸ್ ಸೌಲಭ್ಯವನ್ನು ನಿಲ್ಲಿಸಿತ್ತು. ಕೆಲವೊಂದು ಅಪ್ಲಿಕೇಶನ್ ಮತ್ತು ವೆಬ್ ಸೈಟ್ ಗಳನ್ನು ಉಚಿತವಾಗಿ ಜನರಿಗೆ ನೀಡಿದರೆ ನೆಟ್ ನ್ಯೂಟ್ರಾಲಿಟಿಯ ಮೂಲ ತತ್ವಗಳನ್ನು ಉಲ್ಲಂಘಿಸಿದಂತಾಗುತ್ತದೆ. ಇಂಟರ್ನೆಟ್ ನಲ್ಲಿ ಎಲ್ಲಾ ವೆಬ್ ಸೈಟ್ ಮತ್ತು ಡಾಟಾಗಳನ್ನು ಸಮಾನವಾಗಿ ಪರಿಗಣಿಸಬೇಕು ಎಂದು ಇಂಟರ್ನೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು. ವಿವಿಧ ದರದಲ್ಲಿ ಸೇವೆ ಒದಗಿಸುವುದರಿಂದ ಸಣ್ಣ ಮತ್ತು ಹೊಸ ವೆಬ್ ಹೂಡಿಕೆದಾರರಿಗೆ ಅನಾನುಕೂಲವೇ ಹೆಚ್ಚು ಎಂದು ಅಭಿಪ್ರಾಯ ವ್ಯಕ್ತವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT