ಹುಬ್ಬಳ್ಳಿಯ ಕೇಂದ್ರ ರೇಲ್ವೆ ನಿಲ್ದಾಣದ ಬಳಿ ಕುಸಿದ ಕಟ್ಟಡ ಅವಶೇಷಗಳಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ
ಹುಬ್ಬಳ್ಳಿ: ಹುಬ್ಬಳ್ಳಿಯ ಕೇಂದ್ರ ರೇಲ್ವೆ ನಿಲ್ದಾಣದ ಬಳಿ ಇರುವ ಪಾರ್ಸಲ್ ಕಚೇರಿಯ ಕಟ್ಟಡ ಕುಸಿತದಿಂದಾಗಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಸುಮಾರು 50 ವರ್ಷ ಹಳೆಯದಾದ ಎರಡು ಅಂತಸ್ತಿನ ಕಟ್ಟಡ ನಿನ್ನೆ ದೀಢಿರ್ ಕುಸಿದು ಬಿದ್ದಿದೆ. ಘಟನೆಯಲ್ಲಿ ನಾಲ್ವರು ಸ್ಥಳದಲ್ಲಿ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ತಡರಾತ್ರಿ ಅವಶೇಷಗಳಡಿಯಲ್ಲಿ ಪೇದೆ ಎಸ್ ಎಸ್ ದೀಕ್ಷಿತ್ ಮೃತದೇಹ ಪತ್ತೆಯಾಗಿದೆ. ಇನ್ನೂ ಅವಶೇಷಗಳಡಿ ತಾಯಿ ಮಗು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸತತ 17 ಗಂಟೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ವಿಪತ್ತು ನಿರ್ವಹಣಾ ತಂಡ, ಅಗ್ನಿ ಶಾಮಕ ಸಿಬ್ಬಂದಿ ಹಾಗೂ ರೇಲ್ವೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸುಮಾರು 50 ವರ್ಷ ಹಳೆಯದಾದ ಎರಡು ಅಂತಸ್ತಿನ ಕಟ್ಟಡವಾಗಿತ್ತು.
ಹಳೆಯ ಕಟ್ಟಡ ನೆಲಸಮಗೊಳಿಸುವಾಗ ಕಟ್ಟಡ ಕುಸಿತ
ಹಳೆಯ ಕಟ್ಟಡವನ್ನು ನೆಲಸಮಗೊಳಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ರೈಲ್ವೆ ರಕ್ಷಣಾ ತಂಡದ ಇನ್ಸ್ ಪಕ್ಟರ್ ಕುಬೇರಪ್ಪ ತಿಳಿಸಿದ್ದಾರೆ. ಕಟ್ಟಡದ 2ನೇ ಅಂತಸ್ತಿನಲ್ಲಿ ಪೊಲೀಸ್ ಠಾಣೆ ಇದ್ದಿದ್ದು, ಅದನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು. ಕಟ್ಟಡದ ಮೊದಲ ಅಂತಸ್ತಿನಲ್ಲಿ ಗೋಡೆ ಒಡೆಯುತ್ತಿದ್ದಾಗ ಮೇಲಂತಸ್ತು ಕುಸಿದು ಬಿದ್ದಿದೆ ಎಂದು ಕುಬೇರಪ್ಪ ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics