ಡೇವಿಡ್ ಕೋಲ್‌ವುನ್ ಹೆಡ್ಲಿ
ಮುಂಬೈ: ಭಾರತೀಯ ಸೇನೆಯಲ್ಲಿ ಬೇಹುಗಾರರನ್ನು ನೇಮಕ ಮಾಡುವಂತೆ ಪಾಕಿಸ್ತಾನದ ಐಎಸ್ಐ ತನಗೆ ಸೂಚಿಸಿತ್ತು ಎಂದು ಮಂಗಳವಾರ ಮುಂಬೈ ದಾಳಿಗೆ ಸ್ಕೆಚ್ ಹಾಕುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಪಾಕ್ ಅಮೆರಿಕನ್ ಉಗ್ರ ಡೇವಿಡ್ ಕೋಲ್‌ವುನ್ ಹೆಡ್ಲಿ ಹೇಳಿದ್ದಾನೆ.
ಎರಡನೇ ದಿನ ನುಡಿದಿರುವ ಸಾಕ್ಷಿಯಲ್ಲಿ ಹಲವಾರು ಬೆಚ್ಚಿಬೀಳುವ ಸಂಗತಿಗಳನ್ನು ಹೆಡ್ಲಿ ಬಹಿರಂಗಪಡಿಸಿದ್ದು, ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್‌ಐ, ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ಸಲುವಾಗಿ ಯಾವ್ಯಾವ ರೀತಿಯಲ್ಲಿ ಪಾಕ್ ಉಗ್ರ ಸಂಘಟನೆಗಳೊಂದಿಗೆ ಕೆಲಸ ಮಾಡುತ್ತಿದೆ ಎಂಬುದನ್ನು ವಿಸ್ತಾರವಾಗಿ ಹೇಳಿದ್ದಾನೆ.
2002ರಲ್ಲಿ ನಾನು ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆಯನ್ನು ಸೇರಿಕೊಂಡೆ. ಆ ಹೊತ್ತಿಗಾಗಲೇ ನಾನು ಪಾಕ್ ಸೇನೆಯ ಹಲವು ಉನ್ನತ ಅಧಿಕಾರಿಗಳು ಮತ್ತು ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐ ಇದರ ಸಂಪರ್ಕದಲ್ಲಿದ್ದು ಅವುಗಳಿಗಾಗಿ ಕೆಲಸ ಮಾಡುತ್ತಿದ್ದೆ ಎಂದು ಹೆಡ್ಲಿ ಹೇಳಿದ್ದಾನೆ.
ಐಎಸ್‌ಐ ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆಗೆ ಆರ್ಥಿಕ, ಮಿಲಿಟರಿ ಮತ್ತು ನೈತಿಕ ಬೆಂಬಲ ಹಾಗೂ ಇತರೆ ನೆರುವು ನೀಡುತ್ತದೆ. ಲಷ್ಕರ್ ಮಾತ್ರವಲ್ಲದೆ ಇನ್ನೂ ಹಲವಾರು ಪಾಕ್ ಉಗ್ರ ಸಂಘಟನೆಗಳಿಗೆ ಅದು ಇದೇ ರೀತಿಯ ನೆರವು, ಬೆಂಬಲ ನೀಡುತ್ತದೆ. ಹಿಜ್‌ಬುಲ್ ಮುಜಾಹಿದೀನ್ ಮತ್ತು ಮಸೂದ್ ಅಝರ್ ನೇತೃತ್ವದ ಜೈಶ್ ಇ ಮೊಹಮ್ಮದ್ ಉಗ್ರರ ಸಂಘಟನೆ ಇವುಗಳಲ್ಲಿ ಮುಖ್ಯವಾಗಿವೆ. ಅಂತೆಯೇ ಪಠಾಣ್‌ಕೋಟ್ ದಾಳಿ ನಡೆಸಿದ್ದು ಕೂಡ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯೇ ಎಂದಿದ್ದಾನೆ.