ಹೈದರಾಬಾದ್: ಕಳೆದ ಎರಡು ದಿನಗಳಿಂದ ಕಣ್ಮರೆಯಾಗಿದ್ದ ಹೈದರಾಬಾದ್ ನ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕ ಮೂಲದ ಸಾಫ್ಟ್ವೇರ್ ಎಂಜಿನಿಯರ್ ಅನುಶ್ರೀ ಅವರು ಬುಧವಾರ ಹೈದರಾಬಾದ್ ನ ಪತಂಚೆರುನಲ್ಲಿ ಪತ್ತೆಯಾಗಿದ್ದಾರೆ.
22 ವರ್ಷದ ಅನುಶ್ರೀ ಅವರು ಇಂದು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಪತಂಚೆರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನುಶ್ರೀ ಅವರು ಸೋಮವಾರ ಸಂಜೆಯಿಂದ ಕಾಣೆಯಾಗಿದ್ದರು. ಮಂಗಳವಾರ ಅವರ ತಂದೆ ಪ್ರಭಾಕರ್ ಅವರು ಗಚ್ಚಿಬೌಲಿ ಸೈದರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅನುಶ್ರೀ ಬೆಂಗಳೂರಿನವರಾಗಿದ್ದು, ಗಚ್ಚಿಬೌಲಿಯ ದಿವ್ಯಶ್ರೀ ಮಹಿಳಾ ಹಾಸ್ಟೆಲ್ ಒಂದರಲ್ಲಿ ವಾಸವಾಗಿದ್ದರು. ಅದಿಬಾಟ್ಲಾದಲ್ಲಿರುವ ಟಿಸಿಎಸ್ ಸಂಸ್ಥೆಯಲ್ಲಿ ಈ ಯುವತಿ ಕೆಲಸ ಮಾಡುತ್ತಿದ್ದರು.