ಪ್ರಧಾನ ಸುದ್ದಿ

ಸಿಯಾಚೆನ್ ಹಿಮಪಾತಲ್ಲಿ ಬದುಕುಳಿದ ಯೋಧನಿಗೆ ಕಿಡ್ನಿ ದಾನ ಮಾಡಲು ಮುಂದಾದ ಮಹಿಳೆ

Guruprasad Narayana

ಲಕನೌ: ಸಿಯಾಚೆನ್ ಹಿಮಪಾತದಲ್ಲಿ ೩೫ ಅಡಿ ಹಿಮದ ಅಡಿಯಲ್ಲಿ ಐದು ದಿನಗಳವರೆಗೆ ಸಿಲುಕಿ ಬದುಕುಳಿದ ಕರ್ನಾಟಕ ಮೂಲದ ಧೀರ ಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಅವರ ಕಥೆಯಿಂದ ಸ್ಫೂರ್ತಿಗೊಂಡಿರುವ ಉತ್ತರ ಪ್ರದೇಶದ ಮಹಿಳೆಯೊಬ್ಬರು ಅವರಿಗೆ ಕಿಡ್ನಿ ಕೊಡಲು ಮುಂದಾಗಿದ್ದಾರೆ. ಸದ್ಯಕ್ಕೆ ಗಂಭೀರ ಸ್ಥಿತಿಯಲ್ಲಿರುವ ಹನುಮಂತಪ್ಪ ನವದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉತ್ತರಪ್ರದೇಶದ ರಾಜಧಾನಿಯಿಂದ ೧೬೭ ಕಿಮೀ ದೂರದಲ್ಲಿರುವ ಲಖೀಮ್ಪುರ್ ಖೇರಿ ಪ್ರದೇಶದಲ್ಲಿ ವಾಸವಾಗಿರುವ ನಿಧಿ ಪಾಂಡೆ, ಪ್ರಾದೇಶಿಕ ಸುದ್ದಿ ವಾಹಿನಿಯನ್ನು ಸಂಪರ್ಕಿಸಿ ಕಿಡ್ನಿ ವಿಫಲತೆಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಹನುಮಂತಪ್ಪನವರಿಗೆ ಕಿಡ್ನಿ ಕೊಡಲು ಮುಂದಾಗಿರುವುದಾಗಿ ತಿಳಿಸಿದ್ದು, ಆಸ್ಪತ್ರೆಯ ಸಹಾಯವಾಣಿಗಾಗಿ ಕೇಳಿಕೊಂಡಿದ್ದಾರೆ.

ನಿಧಿ ಪಾಂಡೆಯವರ ಪತಿ ಕೂಡ ಈ ಹಿಂದೆ ಅಂಗಾಂಗ ದಾನ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರಂತೆ.

SCROLL FOR NEXT