ಮುಂಬೈ: ಭಾರತದಲ್ಲಿ ವ್ಯಾಪಾರ ನಡೆಸುವ ಉದ್ದೇಶದಿಂದ ಉಗ್ರ ಡೇವಿಡ್ ಹೆಡ್ಲಿ, ವ್ಯಾಪಾರದ ಖಾತೆ ತೆರೆಯಲು ಸಲ್ಲಿಸಿದ್ದ ಅರ್ಜಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ತಿರಸ್ಕರಿಸಿತ್ತು ಎಂದು ಮುಂಬೈ ಕೋರ್ಟ್ ಮಾಹಿತಿ ನೀಡಿದೆ.
2007ರಲ್ಲಿ ಬ್ಯುಸಿನೆಸ್ ಅಕೌಂಟ್ ತೆರೆಯಲು ಲಷ್ಕರ್ ಇ ತೋಯ್ಬಾ ಸಂಘಟನೆಯ ಉಗ್ರ ಡೇವಿಡ್ ಹೆಡ್ಲಿ ಅರ್ಜಿ ಸಲ್ಲಿಸಿದ್ದನು. ಆದರೆ, ಆತನ ಅರ್ಜಿಯನ್ನು ಆರ್ ಬಿಐ ತಿರಸ್ಕರಿಸಿತ್ತು ಎಂದು ತಿಳಿಸಿದೆ.
ಭಾರತದಲ್ಲಿ ಮಾಹಿತಿ ಕಲೆ ಹಾಕಲು ಹಾಗೂ ಉಗ್ರ ಕಾರ್ಯಾಚರಣೆ ನಡೆಸಲು ಹೆಡ್ಲಿಗೆ ಎಲ್ ಇಟಿ ಉಗ್ರ ಸಂಘಟನೆ ಮತ್ತು ಪಾಕಿಸ್ತಾನದ ಐಎಸ್ ಐ ಹಣ ನೀಡಿತ್ತು. ಅಷ್ಟೇ ಅಲ್ಲದೇ, ಭಾರತದಲ್ಲಿ ವ್ಯಾಪಾರ ಪ್ರಾರಂಭಿಸಲು ಕೂಡ ಹಣ ನೀಡಿದ್ದವು ಎಂದು ತಿಳಿದು ಬಂದಿದೆ.
2006 ಅಕ್ಟೋಬರ್ 12ರಂದು ಮುಂಬೈನ ಟಾರ್ಡಿಯೋ ಪ್ರದೇಶದಲ್ಲಿ ಕಚೇರಿಯನ್ನು ತೆರೆಯಲಾಯಿತು. ಬ್ಯುಸಿನೆಸ್ ಅಕೌಂಟ್ ತೆರೆಯಲು ಅನುಮತಿಗಾಗಿ ಆರ್ ಬಿಐನಲ್ಲಿ ಅರ್ಜಿ ಸಲ್ಲಿಸಿದ್ದೇ ಎಂದು ಹೆಡ್ಲಿ ವಿಡಿಯೋ ಕಾನ್ಫರೆನ್ಸ್ ವಿಚಾರಣೆಯಲ್ಲಿ ಹೇಳಿದ್ದಾನೆ.
2007 ಜನವರಿಯಲ್ಲಿ ವ್ಯಾಪಾರ ನಡೆಸುವ ಉದ್ದೇಶದಿಂದ ಟಾರ್ಡಿಯೋ ಪ್ರದೇಶದಲ್ಲಿ ತಿಂಗಳಿಗೆ ರು.13,500ರಂತೆ ಕಚೇರಿಯೊಂದನ್ನು ಬಾಡಿಗೆಗೆ ಪಡಿದಿದ್ದೆ. ಆಗ ನನಗೆ ವೊರಾ ಮತ್ತು ಮರೂ ಬರುಚಾ ಎಂಬುವವರು ಕಾರ್ಯದರ್ಶಿಗಳಾಗಿ ಕೆಲಸ ಮಾಡುತ್ತಿದ್ದರು. ನಕಲಿ ವೀಸಾ ಪಡೆಯಲು ಸಹಾಯ ಮಾಡುತ್ತಿದ್ದ ಹಾಗೂ ವ್ಯಾಪಾರ ಪಾಲುದಾರನಾಗಿದ್ದ ರೇಮಂಡ್ ಸ್ಯಾಂಡರ್ಸ್ ನನಗೆ ಆರ್ ಬಿಐ ಕುರಿತ ಪೂರ್ಣ ಮಾಹಿತಿ ನೀಡಿ, ನಿಯಮಗಳನ್ನು ವಿವರಿಸಿದ್ದನು. ಅದರ ಪ್ರಕಾರವೇ ನಾನು ಖಾತೆ ತೆರೆಯಲು ಅರ್ಜಿ ಸಲ್ಲಿಸಿದ್ದೆ. ಆದರೆ, ಆರ್ ಬಿಐ ಅರ್ಜಿಯನ್ನು ತಿರಸ್ಕರಿಸಿತು ಎಂದು ಹೆಡ್ಲಿ ತಿಳಿಸಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics