ಬೆಂಗಳೂರು: ವೀರ ಕನ್ನಡಿಗ ಹನುಮಂತಪ್ಪ ಕೊಪ್ಪದ್ ಅವರು ಸೇನೆಗೆ ಸೇರಿದ ಕತೆಯೂ ರೋಮಾಂಚನಕಾರಿ.
ಹನುಮಂತಪ್ಪ ಕೊಪ್ಪದ ಅವರಿಗೆ ಬಾಲ್ಯದಿಂದಲೇ ಸಾಹಸ ಪ್ರವೃತ್ತಿ ಹೆಚ್ಚಿತ್ತು. ಕ್ರೀಡೆಯಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದ ಹನುಮಂತಪ್ಪ, ಸೇನೆ ಸೇರಬೇಕೆಂಬ ಆಸೆಯನ್ನು ಹೊಂದಿದ್ದರು.
ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗಲೇ ಸೇನಾ ನೇಮಕಾತಿ ನಡೆಯುವ ಜಾಗದಲ್ಲಿ ಹಾಜರಿರುತ್ತಿದ್ದರು. ಆದರೆ, ಒಂದಲ್ಲ, ಎರಡಲ್ಲ, ಸತತ ಎಂಟು ಬಾರಿ ಸೇನಾ ನೇಮಕಾತಿಯಲ್ಲಿ ವಿಫಲಗೊಂಡಿದ್ದರು.
ಇಷ್ಟಾದರೂ, ಛಲ ಬಿಡದ ಹನುಮಂತಪ್ಪ, ಸೇನೆಗೆ ಸೇರಲು ಬೇಕಾದಂತಹ ಮೈಕಟ್ಟನ್ನು ಬೆಳಿಸಿಕೊಂಡರು. 9 ನೇ ಬಾರಿಗೆ ಸೇನೆಗೆ ನೇಮಕಾತಿ ಹೊಂದಿದರು. ಅಂತೂ ಪ್ರಯತ್ನ ಮತ್ತು ಛಲ ಬಿಡದ ಹನುಮಂತಪ್ಪ ವೀರ ಸೇನೆಗೆ ಸೇರ್ಪಡೆಗೊಂಡು, ದೇಶಕ್ಕಾಗಿ ಪ್ರಾಣ ಬಿಟ್ಟ ವೀರ ಕನ್ನಡಿಗರಾದರು.