ರಾಷ್ಟ್ರೀಯ ರಕ್ಷಣಾ ಕಾಲೇಜು ಲಷ್ಕರ್ ಉಗ್ರರ ಹಿಟ್ ಲಿಸ್ಟ್ ನಲ್ಲಿತ್ತು: ಹೆಡ್ಲಿ
ಮುಂಬೈ ಕೋರ್ಟ್ ನಲ್ಲಿ ವಿಚಾರಣೆ ಎದುರಿಸುತ್ತಿರುವ ಪಾಕಿಸ್ತಾನಿ- ಅಮೇರಿಕನ್ ಉಗ್ರ ದಿನಕ್ಕೊಂದು ಆಘಾತಕಾರಿ ಮಾಹಿತಿ ಹೊರಗಿಡುತ್ತಿದ್ದಾನೆ.
ಮುಂಬೈ: ಮುಂಬೈ ಕೋರ್ಟ್ ನಲ್ಲಿ ವಿಚಾರಣೆ ಎದುರಿಸುತ್ತಿರುವ ಪಾಕಿಸ್ತಾನಿ- ಅಮೇರಿಕನ್ ಉಗ್ರ ಡೇವಿಡ್ ಹೆಡ್ಲಿ ದಿನಕ್ಕೊಂದು ಆಘಾತಕಾರಿ ಮಾಹಿತಿ ಹೊರಗಿಡುತ್ತಿದ್ದಾನೆ.
ಫೆ.12 ರಂದೂ ವಿಚಾರಣೆ ಎದುರಿಸಿದ ಹೆಡ್ಲಿ ಲಷ್ಕರ್ ಹಾಗೂ ಅಲ್ ಖೈದಾ ಉಗ್ರರ ಹಿಟ್ ಲಿಸ್ಟ್ ನಲ್ಲಿ ನವದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜು ಸಹ ಇತ್ತೆಂದು ಹೇಳಿಕೆ ನೀಡಿದ್ದಾರೆ. 2007 ರಲ್ಲಿ ರಕ್ಷಣಾ ಕಾಲೇಜು ಕ್ಯಾಂಪಸ್ ಗೂ ಭೇಟಿ ನೀಡಿದ್ದಾಗಿ ತಿಳಿಸಿರುವ ಹೆಡ್ಲಿ ಎನ್ ಡಿಸಿಯನ್ನು ಪ್ರತಿಷ್ಠಿತ ಕಾಲೇಜೆಂದು ಉಗ್ರ ಸಂಘಟನೆಗಳು ಪರಿಗಣಿಸಿದ್ದವು ಎಂದು ಹೇಳಿದ್ದಾನೆ.
2008 ರ ದಾಳಿಯ ನಂತರ ಮತ್ತೊಮ್ಮೆ ರಾಷ್ಟ್ರೀಯ ರಕ್ಷಣಾ ಕಾಲೇಜ್ ಕ್ಯಾಂಪಸ್, ಗೋವಾದಲ್ಲಿರುವ ಚಬಾದ್ ಹೌಸ್, ಪುಣೆಗೆ ಭೇಟಿ ನೀಡಿದ್ದಾಗಿ ಹೆಡ್ಲಿ ವಿಚಾರಣೆ ವೇಳೆ ತಿಳಿಸಿದ್ದಾನೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.