ಮುಂಬೈ: ಶಿವ ಸೇನಾ ಸದಸ್ಯನೊಬ್ಬನ ಜೊತೆ ಸ್ನೇಹ ಬೆಳೆಸಲು ಯತ್ನಿಸಿದ್ದೆ ಎಂದು ಪಾಕಿಸ್ತಾನದ ಮೂಲದ ಅಮೆರಿಕ ಉಗ್ರ ಡೇವಿಡ್ ಹೆಡ್ಲಿ ಹೇಳಿದ್ದಾನೆ.
ವಿಡಿಯೋ ಕಾನ್ಫರೆನ್ಸ್ ಈ ಸತ್ಯ ಬಹಿರಂಗಪಡಿಸಿದ್ದಾನೆ, 2006-2007ರಲ್ಲಿ ದಾದರ್ ನಲ್ಲಿರುವ ಶಿವ ಸೇನಾ ಭವನಕ್ಕೆ ಭೇಟಿ ನೀಡಿದ್ದೆ. ಎಲ್ ಇಟಿ ಸಂಘಟನೆ ಮುಂದೊಂದು ದಿನ ಸೇನಾ ಭವನದ ಮೇಲೆ ದಾಳಿ ನಡೆಸಬಹುದು ಎಂಬ ಉದ್ದೇಶದಿಂದ ಭೇಟಿ ನೀಡಿದ್ದೆ. ಹಾಗಾಗಿ, ಅಲ್ಲಿನ ಸದಸ್ಯ ರಾಜರಾಮ್ ಎಂಬಾತನ ಸ್ನೇಹ ಗಳಿಸಲು ಪ್ರಯತ್ನಿಸಿದ್ದೆ ಎಂದು ಹೆಡ್ಲಿ ತಿಳಿಸಿದ್ದಾನೆ.
ಇನ್ನು ಮುಂಬೈನಲ್ಲಿ ಯಾರೊಂದಿಗೆ ಸ್ನೇಹವಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಹೆಡ್ಲಿ, ದಕ್ಷಿಣ ಮುಂಬೈನ್ ಮೋಕ್ಸ್ ಜಿಮ್ ನಡೆಸುತ್ತಿದ್ದ ವಿಲಾಸ್ ವರ್ಕೆ ಎಂಬಾತನ ಜತೆ ಹಾಗೂ ಆತನ ಗೆಳೆಯನಾಗಿದ್ದ ರಾಹುಲ್ ಭಟ್, ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಪುತ್ರನೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದೆ ಎಂದು ಹೆಡ್ಲಿ ಹೇಳಿದ್ದಾನೆ.