ಪ್ರಧಾನ ಸುದ್ದಿ

ಭಾರತೀಯ ಸೇನೆಯಿಂದ ಗೂಢಚಾರಿಯನ್ನು ನೇಮಿಸು ಎಂದಿದ್ದ ಇಕ್ಬಾಲ್: ಹೆಡ್ಲಿ

Mainashree
ಮುಂಬೈ: ಸ್ಐಎಸ್ ಐಗೆ ಪೂರ್ಣ ಮಾಹಿತಿ ನೀಡಲು ಭಾರತೀಯ ಸೇನೆಯಲ್ಲಿ ಒಬ್ಬ ಗೂಢಚಾರಿಯನ್ನು ನೇಮಕ ಮಾಡು ಎಂದು ಐಎಸ್ ಐ ಮೇಜರ್ ಇಕ್ಬಾಲ್ ಸೂಚಿಸಿದ್ದರು ಎಂಬ ವಿವರವನ್ನು ಪಾಕಿಸ್ತಾನದ ಮೂಲದ ಅಮೆರಿಕ ಉಗ್ರ ಡೇವಿಡ್ ಹೆಡ್ಲಿ ಶುಕ್ರವಾರ ಬಹಿರಂಗಪಡಿಸಿದ್ದಾನೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂಬೈ ವಿಶೇಷ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿರುವ ಹೆಡ್ಲಿ, ಪುಣೆಯಲ್ಲಿರುವ ಭಾರತೀಯ ಸೇನೆಯ ಸದರನ್ ಕಮ್ಯಾಂಡ್ ಕೇಂದ್ರಕ್ಕೆ ಭೇಟಿ ನೀಡು. ಹಾಗೆ, ಭಾರತೀಯ ಸೇನೆಯಲ್ಲಿರುವ ಕೆಲವು ಯೋಧರನ್ನು ನಮಗೆ ಮಾಹಿತಿ ಸೋರಿಕೆ ಮಾಡಲು ನೇಮಿಸೆಂದು ಇಕ್ಬಾಲ್ ಸೂಚನೆ ನೀಡಿದ್ದರು ಎಂದು ಹೇಳಿದ್ದಾನೆ.
ಸಿದ್ದಿವಿನಾಯಕ ದೇವಾಲಯ ಮತ್ತು ನೌಕಾ ವಾಯುನೆಲೆ ಮೇಲೆ ದಾಳಿ ನಡೆಸುವ ಎಲ್ ಇಟಿ ಪ್ರಯತ್ನವನ್ನು ನಾನೇ ತಡೆದಿದ್ದೆ. ಎಲ್ಲಾ ಹತ್ತು ಉಗ್ರರು ಒಂದೇ ಸ್ಥಳದ ಮೇಲೆ ಗಮನ ಕೇಂದ್ರಿಕರಿಸಬೇಕು ಎಂಬುದು ನನ್ನ ಉದ್ದೇಶವಾಗಿತ್ತು ಎಂದು ಹೆಡ್ಲಿ ತಿಳಿಸಿದ್ದಾನೆ. 
ಲಷ್ಕರ್ ಇ ತೋಯ್ಬಾದ ಕಮಾಂಡರ್ ಹಫೀಜ್ ಸಯೀದ್ ಮತ್ತು ಕಾರ್ಯಾಚರಣೆ ಕಮಾಂಡರ್ ಝಕೀರ್ ರೆಹಮಾನ್ ಲಖ್ವಿಯನ್ನು ಭೇಟಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ.
SCROLL FOR NEXT