ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ
ಹಾಸನ: ಸಿಯಾಚಿನ್ ಭೀಕರ ಹಿಮಪಾತದಲ್ಲಿ ಹುತಾತ್ಮನಾದ ತೇಜೂರು ಗ್ರಾಮದ ಯೋಧ ನಾಗೇಶ್ ಮನೆಗೆ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆಂದು ತಿಳಿದುಬಂದಿದೆ.
ಈಗಾಗಲೇ ಹುತಾತ್ಮ ಯೋಧ ನಾಗೇಸ್ ಕುಟುಂಬಸ್ಥರನ್ನು ಭೇಟಿ ಮಾಡಿರುವ ಅವರು, ಸಿಯಾಚಿನ್ ನಲ್ಲಿ ಹಿಮಪಾತವಾಗುತ್ತಿದ್ದು, ಪ್ರತಿ ದಿನ ಒಬ್ಬರಲ್ಲ ಒಬ್ಬರು ಸಾವನ್ನಪ್ಪುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಸೂಕ್ತ ಜಾಗ್ರತೆ ವಹಿಸುವ ಅವಶ್ಯಕವಿದೆ. ಇಲ್ಲದಿದ್ದರೆ, ಇದೇ ರೀತಿ ಮತ್ತಷ್ಟು ಯೋಧರ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುತ್ತಿರುತ್ತದೆ ಎಂದು ಹೇಳಿದ್ದಾರೆ.
ಸಿಯಾಚಿನ್ ನಲ್ಲಿ ಫೆ.3 ರಂದು ಸಂಭವಿಸಿದ ಭೀಕರ ಹಿಮಪಾತಕ್ಕೆ ಭಾರತದ 10 ಯೋಧರು ಮೃತಪಟ್ಟಿದ್ದರು. ಮೃತಪಟ್ಟವರಲ್ಲಿ ಮೂವರು ಕರ್ನಾಟಕದ ಯೋಧರಾಗಿದ್ದು, ಮೂವರಲ್ಲಿ ಹನುಮಂತಪ್ಪ ಕೊಪ್ಪದ್ ಅವರ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಇದೀಗ ನಾಗೇಶ್ ಹಾಗೂ ಮಹೇಶ್ ಅವರ ಮೃತದೇಹಗಳು ಪತ್ತೆಯಾಗಿದ್ದು, ಶೀಘ್ರದಲ್ಲೇ ಈ ಇಬ್ಬರು ಯೋಧರ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ತರುವ ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ.