ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡಿ: ಬೆಂಗಳೂರು ಉದ್ಯಮಿಗಳಿಗೆ ಗುಜರಾತ್ ಆಹ್ವಾನ

ಗುಜರಾತ್ ಪ್ರವಾಸಿ ಕ್ಷೇತ್ರಕ್ಕೆ ಕೈಗಾರಿಕೆಯ ಮಾನ್ಯತೆ ನೀಡಿ ಹೊಸ ಪ್ರವಾಸೋದ್ಯಮ ನೀತಿ ಪ್ರಕಟಿಸಿದ್ದು, ಗುಜರಾತ್ ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡಿ...

ಸಂವಾದ ಕಾರ್ಯಕ್ರಮದಲ್ಲಿ ಸೌರಭ್​ಭಾಯಿ ಪಟೇಲ್
Lingaraj Badiger
Updated On : 15 Feb 2016, 11:44 am
ಬೆಂಗಳೂರು: ಗುಜರಾತ್ ಪ್ರವಾಸಿ ಕ್ಷೇತ್ರಕ್ಕೆ ಕೈಗಾರಿಕೆಯ ಮಾನ್ಯತೆ ನೀಡಿ ಹೊಸ ಪ್ರವಾಸೋದ್ಯಮ ನೀತಿ ಪ್ರಕಟಿಸಿದ್ದು, ಗುಜರಾತ್ ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡಿ ಎಂದು ಗುಜರಾತ್ ಸರ್ಕಾರ ಭಾನುವಾರ ಬೆಂಗಳೂರಿನ ಉದ್ಯಮಿಗಳಿಗೆ ಮನವಿ ಮಾಡಿದೆ.
ನಗರದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಗುಜರಾತ್ ಪ್ರವಾಸೋದ್ಯಮ ಸಚಿವ ಸೌರಭ್​ಭಾಯಿ ಪಟೇಲ್, ಪ್ರಸಿದ್ಧ ಐತಿಹಾಸಿಕ ಸ್ಥಳ, ಸಮುದ್ರತೀರ ಮತ್ತು ಪಾರಂಪರಿಕ ತಾಣಗಳನ್ನು ಹೊಂದಿರುವ ಗುಜರಾತ್ ನಲ್ಲಿ ಬಂಡವಾಳ ಹೂಡಿಕೆ ಮಾಡುವ ಕಂಪನಿಗಳಿಗೆ 50 ಬಗೆಯ ತೆರಿಗೆ ರಿಯಾಯ್ತಿ ಮತ್ತು ವಿನಾಯ್ತಿ ಸೌಲಭ್ಯ ನೀಡಲಾಗುತ್ತದೆ ಎಂದರು.
ಹೆರಿಟೇಜ್, ಸಮುದ್ರ ತೀರ, ವಾಟರ್​ಸ್ಪೋರ್ಟ್್ಸ ಕೆಫೆಟ್ರಿಯಾ, ಹೊಟೇಲ್ ಸೇರಿ ಪರಿಸರ ಸ್ನೇಹಿ ಪ್ರವಾಸೋದ್ಯಮ ಯೋಜನೆಗಳಲ್ಲಿ ಬಂಡವಾಳ ಹೂಡಲು ಗುಜರಾತ್​ನಲ್ಲಿ ಅವಕಾಶವಿದೆ. ಹೂಡಿಕೆ ಮಾಡುವ ಕಂಪನಿಗಳಿಗೆ ಬಂಡವಾಳ ಸಬ್ಸಿಡಿ, ಬಡ್ಡಿ ಸಬ್ಸಿಡಿ, ನೋಂದಣಿ ಶುಲ್ಕದಲ್ಲಿ ರಿಯಾಯಿತಿ, ವಿಲಾಸಿ ತೆರಿಗೆ, ಮನರಂಜನೆ ತೆರಿಗೆ ರಿಯಾಯಿತಿ ಸೇರಿ ಒಟ್ಟು 50 ರೀತಿಯ ತೆರಿಗೆ ವಿನಾಯಿತಿ ಸೌಲಭ್ಯಗಳನ್ನು ಗುಜರಾತ್ ಸರ್ಕಾರ ನೀಡಲಿದೆ ಎಂದು ವಿವರಿಸಿದರು.

Advertisement

Advertisement

2015-ಗುಜರಾತ್ ಪ್ರವಾಸೋದ್ಯಮ ನೀತಿ ಕುರಿತು ಹೆಚ್ಚು ಪ್ರಚಾರ ಮಾಡಲು ಮಾರ್ಚ್​ನಲ್ಲಿ ಬೆಂಗಳೂರು, ನವದೆಹಲಿ, ಮುಂಬೈ ಸೇರಿ ದೇಶದ ಪ್ರಮುಖ ನಗರಗಳಲ್ಲಿ ರೋಡ್​ಷೋನಡೆಸಲಾಗುವುದು. ಪ್ರವಾಸೋದ್ಯಮ ನೀತಿ 2015ರಿಂದ 2020ರ ಮಾ. 31ರವರೆಗೆ ಜಾರಿಯಲ್ಲಿರುತ್ತದೆ. ಅಷ್ಟರೊಳಗೆ ಜಾರಿಯಾಗುವ ಯೋಜನೆಗಳಿಗೆ ಭಾರಿ ಉತ್ತೇಜನ ನೀಡಲಾಗುತ್ತದೆ ಎಂದು ಸೌರಭ್​ಭಾಯಿ ಪಟೇಲ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement