ಬೆಂಗಳೂರು: ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 18ರಂದು 2016-17ನೇ ಸಾಲಿನ ಬಜೆಟ್ ನ್ನು ಮಂಡಿಸಲಿದ್ದಾರೆ.
ಇದೇ ತಿಂಗಳ 29ರಿಂದ ಐದು ದಿನಗಳ ಕಾಲ ವಿಶೇಷ ಅಧಿವೇಶನ ನಡೆಯಲಿದ್ದು, ಇದಾದ ಬಳಿಕ ಬಜೆಟ್ ಅಧಿವೇಶನ ಆರಂಭವಾಗಲಿದೆ. ಮುಖ್ಯಮಂತ್ರಿಯಾಗಿ ನಾಲ್ಕನೆ ಬಾರಿ ಹಾಗೂ ವಿತ್ತ ಸಚಿವರಾಗಿ 11ನೇ ಬಾರಿ ಬಜೆಟ್ ಮಂಡಿಸುತ್ತಿರುವ ಸಿದ್ದರಾಮಯ್ಯ ಈ ಬಾರಿ ಜನಪ್ರಿಯ ಹಾಗೂ ಭಿನ್ನವಾದ ಬಜೆಟ್ ಕೊಡಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ.
ಹೊಸ ಕರ ಭಾರ, ಜನಪ್ರಿಯ ಘೋಷಣೆಗಳಿಂದ ಹೊರತಾದ ಹಾಗೂ ಕೃಷಿ, ನೀರಾವರಿ, ಇಂಧನ ಇನ್ನಿತರ ಆದ್ಯತಾ ಕ್ಷೇತ್ರಗಳಿಗೆ ಒತ್ತು ಕೊಡುವುದು 2016-17ನೇ ಸಾಲಿನ ಬಜೆಟ್ ನ ವೈಶಿಷ್ಟ್ಯವಾಗಿರಲಿದೆ.