ಹಿಮಪಾತದಲ್ಲಿ ಹುತಾತ್ಮರಾದ ಎಚ್.ಡಿ.ಕೋಟೆಯ ಪಿ.ಎನ್. ಮಹೇಶ್ ಹಾಗೂ ಹಾಸನದ ಟಿ.ಟಿ.ನಾಗೇಶ್ 
ಪ್ರಧಾನ ಸುದ್ದಿ

ಮೃತ ಯೋಧರ ಪಾರ್ಥಿವ ಶರೀರ ಇಂದು ರಾಜ್ಯಕ್ಕೆ?

ಸಿಯಾಚಿನ್ ನಲ್ಲಿ ಸಂಭವಿಸಿದೆ ಭೀಕರ ಹಿಮಪಾತದಲ್ಲಿ ಮೃತಪಟ್ಟ ಯೋಧರಾದ ಎಚ್.ಡಿ.ಕೋಟೆಯ ಪಿ.ಎನ್. ಮಹೇಶ್, ಹಾಸನದ ಟಿ.ಟಿ.ನಾಗೇಶ್ ಅವರ ಪಾರ್ಥೀವ ಶರೀರಗಳು ಇಂದು ರಾಜ್ಯಕ್ಕೆ ಆಗಮಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ...

ಬೆಂಗಳೂರು: ಸಿಯಾಚಿನ್ ನಲ್ಲಿ ಸಂಭವಿಸಿದೆ ಭೀಕರ ಹಿಮಪಾತದಲ್ಲಿ ಮೃತಪಟ್ಟ ಯೋಧರಾದ ಎಚ್.ಡಿ.ಕೋಟೆಯ ಪಿ.ಎನ್. ಮಹೇಶ್, ಹಾಸನದ ಟಿ.ಟಿ.ನಾಗೇಶ್ ಅವರ ಪಾರ್ಥೀವ ಶರೀರಗಳು ಇಂದು ರಾಜ್ಯಕ್ಕೆ ಆಗಮಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 
ಮೃತ ಯೋಧರ ಪಾರ್ಥೀವ ಶರೀರ ನಿನ್ನೆ ರಾಜ್ಯಕ್ಕೆ ಆಗಮಿಸಬೇಕಿತ್ತು. ಆದರೆ, ಹವಾಮಾನ ವೈಪರೀತ್ಯವುಂಟಾಗಿ ವಿಮಾನ ಹಾರಾಟಕ್ಕೆ ಸಮಸ್ಯೆಯುಂಟಾದ ಕಾರಣ ಸಾಧ್ಯವಾಗಿರಲಿಲ್ಲ. ಇಂದು ಹಮಾಮಾನದಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಿದ್ದರೆ ಪಾರ್ಥಿವ ಶರೀರಗಳು ರಾಜ್ಯಕ್ಕೆ ಕರೆತರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 
ಸಿಯಾಚಿನ್ ನಲ್ಲಿ ಫೆ.3 ರಂದು ಸಂಭವಿಸಿದ ಭೀಕರ ಹಿಮಪಾತಕ್ಕೆ ಭಾರತದ 10 ಯೋಧರು ಮೃತಪಟ್ಟಿದ್ದರು. ಮೃತಪಟ್ಟವರಲ್ಲಿ ಮೂವರು ಕರ್ನಾಟಕದ ಯೋಧರಾಗಿದ್ದು, ಮೂವರಲ್ಲಿ ಹನುಮಂತಪ್ಪ ಕೊಪ್ಪದ್ ಅವರ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಇದೀಗ ನಾಗೇಶ್ ಹಾಗೂ ಮಹೇಶ್ ಅವರ ಮೃತದೇಹಗಳು ಪತ್ತೆಯಾಗಿದ್ದು, ಶೀಘ್ರದಲ್ಲೇ ಈ ಇಬ್ಬರು ಯೋಧರ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ತರುವ ಪ್ರಯತ್ನಗಳು ನಡೆಯುತ್ತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT