ಕಣ್ಣೂರು: ಪಿ ವಿ ಸುಜಿತ್(೨೭) ಎಂದು ಗುರುತಿಸಲಾಗಿರುವ ಆರ್ ಎಸ್ ಎಸ್ ಕಾರ್ಯಕರ್ತನನ್ನು ಪಪ್ಪಿನಿಸ್ಸೇರಿಯ ಅವರ ನಿವಾಸದ ಬಳಿ ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ. ಕೊಲೆಗಡುಕರಿಂದ ಮಗನನ್ನು ರಕ್ಷಿಸಲು ಮುಂದಾದ ಪೋಷಕರಿಗೂ ಈ ದಾಳಿಯಲ್ಲಿ ತೀವ್ರ ಗಾಯಗಳಾಗಿವೆ.
ಸೋಮವಾರ ರಾತ್ರಿ ಸುಮಾರು ೧೧:೩೦ ಕ್ಕೆ ಈ ಘಟನೆ ನಡೆದಿದ್ದು, ಆಯುಧಗಳನ್ನು ಹಿಡಿದ ಒಂದು ಗುಂಪು, ವಾಲಪಟ್ಟಣಮ್ ಪೊಲೀಸ್ ಠಾಣೆಯ ಸುಪರ್ದಿಯಲ್ಲಿರುವ ಪಪ್ಪಿನಿಸ್ಸೇರಿಯ ಅರೋಲಿ ಬಳಿ ಇರುವ ಸಂತ್ರಸ್ತನ ಮನೆಗೆ ನುಗ್ಗಿ ದಾಳಿ ನಡೆಸಿದೆ. ಸಂತ್ರಸ್ತನಿಗೆ ಇರಿದ ಗಾಯಗಳಾಗಿದ್ದು ಕೂಡಲೇ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದರೂ ಅವರು ಅಸು ನೀಗಿದ್ದಾರೆ. ಈ ಕೊಲೆಯ ಹಿಂದೆ ಸಿ ಪಿ ಎಂ ಪಕ್ಷದ ಕೈವಾಡವಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಮುಖಂಡರು ದೂರಿದ್ದಾರೆ.
ಈ ದಾಳಿಯ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು ಶಂಕಿತ ಸಿ ಪಿ ಎಂ ಕಾರ್ಯಕರ್ತನೋಬ್ಬನನ್ನು ಬಂಧಿಸಿದ್ದಾರೆ.