ಪ್ರಧಾನ ಸುದ್ದಿ

ಕೋರ್ಟ್ ದಾಳಿ; ಪೊಲೀಸರ ಮುಂದೆ ಹಾಜರಾದ ಬಿಜೆಪಿ ಶಾಸಕ ಶರ್ಮ

Guruprasad Narayana

ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ ಕುಮಾರ್ ಅವರನ್ನು ದೇಶದ್ರೋಹ ಆರೋಪದ ಮೇಲೆ ದೆಹಲಿ ಪೊಲೀಸರು ಬಂಧಿಸಿರುವ ಹಿನ್ನಲೆಯಲ್ಲಿ, ಸಿ ಪಿ ಐ ಕಾರ್ಯಕರ್ತನೊಬ್ಬನನ್ನು ಪಟಿಯಾಲ ಹೌಸ್ ಕೋರ್ಟ್ ಆವರಣದಲ್ಲಿ ಥಳಿಸಿದ್ದ ಬಿಜೆಪಿ ಶಾಸಕ ಒ ಪಿ ಶರ್ಮಾ ಅವರಿಗೆ ಪೊಲೀಸರು ನೀಡಿದ್ದ ಸಮನ್ಸ್ ಮೇರೆಗೆ ವಿಚಾರಣೆಗೆ ಹಾಜರಾಗಿದ್ದಾರೆ.

ಮೊದಲ ಬಾರಿಗೆ ಶಾಸಕನಾಗಿರುವ ಶರ್ಮ, ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪೊಲೀಸರ ಮುಂದೆ ಹಾಜರಾಗಿದ್ದಾರೆ.

ಜೆ ಎನ್ ಯು ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಪತ್ರಕರ್ತರ ಮೇಲೆ ಶರ್ಮ ಮತ್ತು ಮೂರು ವಕೀಲರು ದಾಳಿ ನಡೆಸಿದ್ದು ವಿಡಿಯೋದಲ್ಲಿ ರೆಕಾರ್ಡ್ ಆಗಿತ್ತು. ಪೊಲೀಸರು ನೆನ್ನೆ ಈ ನಾಲ್ಕೂ ಜನಕ್ಕೆ ಸಮನ್ಸ್ ನೀಡಿದ್ದರು.

ಈ ದಾಳಿ ನಡೆಯುವಾಗ ಮೂಕ ಪ್ರೇಕ್ಷಕರಂತೆ ನಿಂತಿದ್ದ ದೆಹಲಿ ಪೊಲೀಸರು ತೀವ್ರ ಟೀಕೆಗೆ ಗುರಿಯಾಗಿದ್ದರು.

SCROLL FOR NEXT