ಪ್ರಧಾನ ಸುದ್ದಿ

ಜೆಎನ್‌ಯು ನಲ್ಲಿ 'ದೇಶ ವಿರೋಧಿ' ಚಟುವಟಿಕೆಯ ಮುನ್ನ ಉಮರ್ ಖಾಲಿದ್ ಮಾಡಿದ್ದೇನು?

Rashmi Kasaragodu
ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ದೇಶ ವಿರೋಧಿ ಘೋಷಣೆ ಕೂಗಿ ಈಗ ತಲೆ ಮರೆಸಿಕೊಂಡಿರುವ ವಿದ್ಯಾರ್ಥಿ ಉಮರ್‌ಖಾಲಿದ್ ಈ ಎಲ್ಲ ಚಟುವಟಿಕೆಗಳಿಗೆ ಮುನ್ನ ಏನು ಮಾಡಿದ್ದ ಎಂಬುದು ಈಗ ಬಹಿರಂಗವಾಗಿದೆ.
ಜೆಎನ್‌ಯುನಲ್ಲಿ ಉಮರ್ ಖಾಲಿದ್ ದೇಶ ವಿರೋಧಿ ಘೋಷಣೆ ಕೂಗಿದ್ದಾನೆ ಎಂಬ ಆರೋಪವಿದ್ದು, ಆತನಿಗಾಗಿ ದೆಹಲಿ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ.
ಉಮರ್ ಖಾಲಿದ್ ಏನೇನು ಮಾಡಿದ್ದ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ
  • ಎರಡು ಫೋನ್ ನಂಬರ್‌ಗಳಿಂದ ಉಮರ್ ಖಾಲಿದ್ ಫೋನ್ ಮಾಡಿದ್ದನು. ಆ ಎರಡೂ ಫೋನ್ ನಂಬರ್‌ಗಳು ಆತನ ಹೆಸರಿನಲ್ಲಿ ಇಲ್ಲ.
  • ಫೆ. 3 ರಿಂದ 9ರ ವರೆಗೆ ಈತ 800ಕ್ಕಿಂತಲೂ ಹೆಚ್ಚು ಕರೆಗಳನ್ನು ಮಾಡಿದ್ದಾನೆ.
  • ಆ ಕರೆಗಳಲ್ಲಿ 38 ಕರೆಗಳು ಜಮ್ಮು ಕಾಶ್ಮೀರದಲ್ಲಿರುವವರಿಗೆ ಮಾಡಿದ್ದಾಗಿದೆ. 
  • ಜಮ್ಮು ಕಾಶ್ಮೀರದಿಂದ ಬಂದ 65 ಕರೆಗಳನ್ನು ಈತ ಸ್ವೀಕರಿಸಿದ್ದಾನೆ.
  • ಈತ ಬಾಂಗ್ಲಾದೇಶಕ್ಕೂ ಕರೆ ಮಾಡಿದ್ದಾನೆ.
  • ಒಂದು ತಿಂಗಳಲ್ಲಿ ಈತ 17 ಬಾರಿ ದೆಹಲಿಯಿಂದ ಹೊರ ಹೋಗಿದ್ದಾನೆ.
  •  ಡಿ. 2015ರ ನಂತರ ಈತನಿಗೆ ಬರುವ, ಮಾಡುವ ಕರೆಗಳ ಸಂಖ್ಯೆ ಜಾಸ್ತಿಯಾಗಿದೆ
ಆದಾಗ್ಯೂ, ಪಿಹೆಚ್‌ಡಿ ವಿದ್ಯಾರ್ಥಿಯಾಗಿರುವ ಈತನಿಗೆ ಉಗ್ರ ಸಂಘಟನೆಗಳೊಂದಿಗೆ ಲಿಂಕ್ ಇದೆಯೇ? ಎಂಬುದರ ಬಗ್ಗೆ ಪೊಲೀಸರು ಪತ್ತೆ ಮಾಡುತ್ತಿದ್ದಾರೆ.
SCROLL FOR NEXT