ಸಮಾರೋಪ ಸಮಾರಂಭ ಉದ್ಘಾಟಿಸುತ್ತಿರುವ ಸಿದ್ದರಾಮಯ್ಯ 
ಪ್ರಧಾನ ಸುದ್ದಿ

ನಾನು ನಾಸ್ತಿಕನಲ್ಲ, ನಾನೂ ದೇವಾಲಯಗಳಿಗೆ ಹೋಗುತ್ತೇನೆ: ಸಿಎಂ ಸಿದ್ದರಾಮಯ್ಯ

ನಾನು ನಾಸ್ತಿಕ ಅಲ್ಲ. ನಾನೂ ದೇವಾಲಯಗಳಿಗೆ ಹೋಗುತ್ತೇನೆ. ಆದರೆ ನಾಸ್ತಿಕ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

ಟಿ.ನರಸೀಪುರ: ನಾನು ನಾಸ್ತಿಕ ಅಲ್ಲ. ನಾನೂ ದೇವಾಲಯಗಳಿಗೆ ಹೋಗುತ್ತೇನೆ. ಆದರೆ ನಾಸ್ತಿಕ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ಇಂದು ತಿರುಮಕೂಡಲಿನಲ್ಲಿ ಆಯೋಜಿಸಿದ್ದ ಹತ್ತನೇ ಕುಂಭಮೇಳದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಿಎಂ, ನಾನು ನಾಸ್ತಿಕನಲ್ಲ, ನಾನೂ ದೇವಾಲಯಗಳಿಗೆ ಹೋಗುತ್ತೇನೆ. ಆದರೆ ಕಂಡಕಂಡ ದೇವಾಲಯಗಳಿಗೆ ಹೋಗುವುದಿಲ್ಲ. ದೇವರು ಒಬ್ಬ. ನಾಮ ಹಲವು ಎಂಬ ನಂಬಿಕೆ ಇದೆ ಎಂದರು.
ಅವಿಭಕ್ತ ಕುಟುಂಬದಿಂದ ಬಂದ ನನಗೆ ಗುರು ಹಿರಿಯರು, ಧರ್ಮ ದೇವರ ಬಗ್ಗೆ ಅತ್ಯಂತ ಗೌರವವಿದೆ. ಆದರೇ ಮೌಡ್ಯ ಹಾಗೂ ಕಂದಾಚಾರಗಳಿಗೆ ವಿರೋಧ ವ್ಯಕ್ತ ಪಡಿಸುತ್ತೇನೆ. ಹಿಮಾಲಯದಲ್ಲಿರುವ ದೇವರ ಬಗ್ಗೆ ನಂಬಿಕೆಯಿಲ್ಲ. ಸ್ಥಳೀಯವಾಗಿ ನಮ್ಮ ಮುಂದೆ ಕಾಣುವ ದೇವರ ಬಗ್ಗೆ ನಂಬಿಕೆಯಿದೆ. ಮನುಷ್ಯನನ್ನು ಮನುಷ್ಯರಾಗಿ ಕಂಡಾಗ ದೈವತ್ವ ಗೋಚರಿಸುತ್ತದೆ. ವಿನಾಕಾರಣ ಕಾಣದ ದೇವರ ಬಗ್ಗೆ ಹೆಚ್ಚಿಗೆ ಮಹತ್ವ ಕೊಡಲಾರೆ ಎಂದರು.
ಸಹಜವಾಗಿ ಮಾನವರು ಒಳಗೊಂದು, ಹೊರಗೊಂದು ರೀತಿಯ ಗುಣಗಳನ್ನು ಹೊಂದಿರುತ್ತಾರೆ. ಇಂತಹ ಪ್ರವೃತ್ತಿ ಒಳ್ಳೆಯದಲ್ಲ. ಬಸವಣ್ಣನ ನಾಣ್ನುಡಿಯಂತೆ ಇವನಾರವ ಇವನಾರವ ಎನ್ನದೆ ಇವನಮ್ಮವ ಇವನಮ್ಮವ ಎಂದೆನಿಸಯ್ಯ… ಎಂಬಂತೆ ಎಲ್ಲರನ್ನು ಒಂದೇ ಭಾವನೆಯಿಂದ ಕಾಣುವುದು ಸೂಕ್ತ. ಸದ್ಗುಣಗಳನ್ನು ಹೊಂದಿದ ವ್ಯಕ್ತಿಯೇ ದೇವರಿಗೆ ಸಮಾನ. ಆದ್ದರಿಂದ ದೇವರನ್ನು ಮನುಷ್ಯನಲ್ಲಿ ಕಾಣುವುದು ಸೂಕ್ತ ಎಂದು ಸಿಎಂ ಹೇಳಿದರು.
ಇದೇ ವೇಳೆ ಕುಂಭಮೇಳಕ್ಕೆ 50 ಕೋಟಿ ರುಪಾಯಿ ಬಿಡುಗಡೆ ಮಾಡಿದ್ದು, ಈ ಹಣವನ್ನು 3 ವರ್ಷದೊಳಗೆ ಉಪಯೋಗಿಸಿಕೊಂಡು ಎಲ್ಲಾ ರೀತಿಯ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ. ಮುಂದಿನ ಕುಂಭ ಮೇಳಕ್ಕೂ ಎಲ್ಲಾ ರೀತಿಯ ಸೌಲಭ್ಯ ಒದಗಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.
ಸಮಾರಂಭದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ, ಸಚಿವರಾದ ಮಹದೇವಪ್ಪ, ಮಹದೇವಪ್ರಸಾದ್, ಸಂಸದ ಧೃವನಾರಾಯಣ್, ಸೇರಿದಂತೆ ಇನ್ನಿತರ ಗಣ್ಯರು, ಮಠಾಧೀಶರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT