ಮುಂಬೈ: ಕೆಲವರು ಸರ್ಕಾರಕ್ಕೆ ಮಸಿ ಬಳಿದು ಅಸ್ಥಿರಗೊಳಿಸಲು ಪ್ಯಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಹೇಳಿರುವ ಹಿನ್ನಲೆಯಲ್ಲಿ, ಈ ಸರ್ಕಾರಡಡಿ ದೇಶದ ಸ್ಥಿರತೆಯ ಬಗ್ಗೆ ಶಿವಸೇನೆ ಪಕ್ಷ ಮಂಗಳವಾರ ಕಳವಳ ವ್ಯಕ್ತಪಡಿಸಿದೆ.
"ಸರ್ಕಾರಗಳು ಬರುತ್ತವೆ, ಹೋಗುತ್ತವೆ ಆದರೆ ದೇಶ ಸ್ಥಿರವಾಗಿರಬೇಕು" ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಸಂಪಾದಕೀಯ "ಮೋದಿಯ ನೋವು" ಎಂಬ ಲೇಖನದಲ್ಲಿ ಬರೆಯಲಾಗಿದೆ.
ಮೋಸಗಾರ ಪಾಕಿಸ್ತಾನ ಮತ್ತು "ಗೊಣಗಾಟದ ಕೆಲವು ಎನ್ ಜಿ ಒ ಗಳು ಹಾಗೂ ಕಳ್ಳ ಸಾಗಾಣಿಕೆದಾರರಿಂದ" ಅವರಿಂದ ಸುತ್ತುವರಿದ ತೊಂದರೆಗಳಿಂದ ಮೋದಿ ಹೇಳಿಕೆ ಅರ್ಥವಾಗುತ್ತದೆ ಎಂದು ಕೂಡ ಸಂಪಾದಕೀಯ ಹೇಳಿದೆ.
ಡಿಸೆಂಬರ್ ನಲ್ಲಿ ಪಾಕಿಸ್ತಾನಿ ಪ್ರಧಾನಿ ನವಾಜ್ ಶರೀಫ್ ಅವರ ಜೊತೆ ದಿಢೀರ್ ಭೇಟಿ ಮಾಡಿದ ನಂತರ ಭಯೋತ್ಪಾದಕ ಪ್ರಕರಣಗಳು ಹೆಚ್ಚಾಗಿವೆ ಎಂದು ಕೂಡ ಸಂಪಾದಕೀಯ ಹೇಳಿದೆ.
"ನೆರೆಯ ದೇಶದ ಬಗ್ಗೆ ಮೋದಿ ಅವರ ಪ್ರಯತ್ನ ಪ್ರಾಮಾಣಿಕವಾಗಿತ್ತು. ಆದರೆ ನಮ್ಮ ಪ್ರಕಾರ ಪಾಕಿಸ್ತಾನ ಬೆನ್ನಿಗೆ ಚೂರಿ ಹಾಕಿದೆ" ಎಂದು ತಮ್ಮ ಹಳೆಯ ವಾದವನ್ನು ಶಿವಸೇನೆ ಮುಂದುವರೆಸಿದ್ದಾರೆ.
ಜೆ ಎನ್ ಯು ವಿವಾದ, ಜಾಟ್ ಸಮುದಾಯದ ಧರಣಿ, ಅಪ್ಜಲ್ ಗುರುವಿಗೆ ಪರದ ಘೋಷಣೆ ಇವುಗಳ ಬಗ್ಗೆಯೂ ಪ್ರಶ್ನಿಸಿರುವ ಶಿವಸೇನೆ "ಇವುಗಳನ್ನೆಲ್ಲಾ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದು ಮೋದಿ ಮತ್ತು ಸರ್ಕಾರಕ್ಕೆ ಮಸಿ ಬಳಿಯುವುದ್ದಕ್ಕಷ್ಟೇ ಮಾಡಿರುವ ತಂತ್ರವಲ್ಲ ಬದಲಾಗಿ ಇಡೀ ದೇಶಕ್ಕೆ ಕೆಟ್ಟ ಹೆಸರು ಮೂಡಿಸಲು ಮಾಡಿರುವ ತಂತ್ರ. ಇದರ ಹಿಂದೆ ಇರುವವರು ಯಾರು?" ಎಂದು ಸೇನೆ ಪ್ರಶ್ನಿಸಿದೆ.
"ಈ ಘಟನೆಗಳ ಹಿನ್ನಲೆಯಲ್ಲಿ, ದೇಶದ ಸ್ಥಿರತೆ ಉಳಿಯುತ್ತದೆಯೇ?" ಎಂದು ಕಳವಳ ವ್ಯಕ್ತಪಡಿಸಿರುವ ಶಿವಸೇನೆ ಸರ್ಕಾರದ ಸ್ಥಿರತೆ ಮತ್ತು ದೀರ್ಘ ಕಾಲದ ಆಡಳಿತಕ್ಕೆ ಆಶಿಸಿದೆ.