ಪ್ರಧಾನ ಸುದ್ದಿ

ಇಶ್ರತ್ ಜಹಾನ್ ಪ್ರಕರಣದಲ್ಲಿ ಚಿದಂಬರಂ ವಿರುದ್ಧದ ಅರ್ಜಿ ಆಲಿಸಲಿರುವ ಸುಪ್ರೀಂ ಕೋರ್ಟ್

Guruprasad Narayana

ನವದೆಹಲಿ: ಲಷ್ಕರ್ ಎ ತೈಬಾ ಭಯೋತ್ಪಾದಕ ಸಂಘಟನೆಯ ಜೊತೆಗೆ, ಇಶ್ರತ್ ಜಹಾನ್ ಅವರ ಸಂಬಂಧದ ಬಗ್ಗೆ ಗುಜರಾತ್ ಹೈಕೋರ್ಟ್ ಮತ್ತು ಅಪೆಕ್ಸ್ ಕೋರ್ಟ್ ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಮಾಜಿ ಕೇಂದ್ರ ಗೃಹ ಸಚಿವ ಚಿದಂಬರಂ ವಿರುದ್ಧ ಸ್ವಯಂಕೃತ ನ್ಯಾಯಾಂಗ ನಿಂದನೆಯ ಆರೋಪ ಹೊರಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಆಲಿಸಲಿದೆ.

೨೦೦೫ರಲ್ಲಿ ಗುಜರಾತ್ ಪೊಲೀಸರು ಇಶ್ರತ್ ಜಹಾನ್ ಳನ್ನು ಕೊಂದಿದ್ದರು.

ಇಶ್ರತ್ ಜಹಾನ್ ಅವರನ್ನು ನಕಲಿ ಎಂಕೌಂಟರ್ ಎಂದು ಗುಜರಾತ್ ಪೊಲೀಸರು ಹಾಗೂ ಇತರರ ವಿರುದ್ಧ ತೆಗೆದುಕೊಂಡಿರುವ ಕ್ರಿಮಿನಲ್ ಕ್ರಮಗಳನ್ನು ಅಸಂವಿಧಾನಿಕ ಎಂದು ಘೋಷಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಮುಖ್ಯ ನ್ಯಾಯಾಧೀಶ ಟಿ ಎಸ್ ಠಾಕೂರ್, ನ್ಯಾಯಮೂರ್ತಿ ಉದಯ್ ಉಮೇಶ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಅರ್ಜಿದಾರ ವಕೀಲ ಎಂ ಎಲ್ ಶರ್ಮಾ ಅವರಿಗೆ ಅರ್ಜಿ ಸಲ್ಲಿಸುವಂತೆ ಹೇಳಿ, ಮುಂದೆ ಅದು ವಿಚಾರಣೆಗೆ ಬರಲಿ ಎಂದಿದ್ದಾರೆ.

ಪಾಕಿಸ್ತಾನ-ಅಮೇರಿಕಾ ಮೂಲದ ಲಷ್ಕರ್ ಎ ತೈಬಾ ಏಜೆಂಟ್ ಡೇವಿಡ್ ಹೆಡ್ಲಿ, ಇಶ್ರತ್ ಜಹಾನ್, ಎಲ್ ಇ ಟಿ ಜೊತೆಗೆ ಸಂಪರ್ಕ ಹೊಂದಿದ್ದಳು ಎಂದು ವಿಚಾರಣೆ ವೇಳೆಯಲ್ಲಿ ಒಪ್ಪಿಕೊಂಡಿರುವ ಹಿನ್ನಲೆಯಲ್ಲಿ, ಈ ಪ್ರಕರಣದಲ್ಲಿ ಆರೋಪಿಗಳೆಂದು ಗುರುತಿಸಲಾಗಿರುವ ಗುಜರಾತಿನ ಪೊಲೀಸರಿಗೆ ಪರಿಹಾರ ನೀಡಬೇಕು ಎಂದು ಕೂಡ ಅರ್ಜಿಯಲ್ಲಿ ಕೇಳಿಕೊಳ್ಳಲಾಗಿದೆ.

SCROLL FOR NEXT