ನರೇಂದ್ರ ಮೋದಿ 
ಪ್ರಧಾನ ಸುದ್ದಿ

ಬಸವಣ್ಣನವರ ವಿಚಾರಧಾರೆ ಇಡೀ ವಿಶ್ವಕ್ಕೆ ಮಾದರಿ: ಪ್ರಧಾನಿ ಮೋದಿ

ಸಮಾನತೆ, ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರ ವಿಚಾರಧಾರೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ...

ಮೈಸೂರು: ಸಮಾನತೆ, ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರ ವಿಚಾರಧಾರೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
ಮಹಾರಾಜ ಕಾಲೇಜ್ ಮೈದಾನದಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜನ್ಮ ಶತಮಾನೋತ್ಸವ ಉದ್ಘಾಟಿಸಿ ಮಾತನಾಡಿದ ಮೋದಿ, 'ಬಂಧು ಭಗಿನಿಯರೇ ನಿಮಗೆಲ್ಲಾ ನನ್ನ ನಮಸ್ಕಾರಗಳು' ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು. ಬಳಿಕ 'ನನ್ನ ಭಾಷಣದ ಕನ್ನಡ ಅನುವಾದ ಬೇಕಾಗಿಲ್ಲ ಅನಿಸುತ್ತೆ' ಎಂದರು.
ಕೆಲವು ದಿನಗಳ ಹಿಂದೆ ನಾನು ಲಂಡನ್‌ಗೆ ಹೋಗಿದ್ದೆ. ಅಲ್ಲಿ ಮಹಾತ್ಮ ಬಸವೇಶ್ವರರ ಪ್ರತಿಮೆ ಅನಾವರಣ ಮಾಡಿದೆ. ಸಮಾನತೆ, ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ. ಬಸವಣ್ಣನವರ ವಿಚಾರಧಾರೆ ಇಡೀ ವಿಶ್ವಕ್ಕೆ ಮಾದರಿ. ಅಂತಹ ಅಪೂರ್ವ ಸಾಧಕರು ಹುಟ್ಟಿದ ನೆಲದಲ್ಲಿ  ನಾನಿದ್ದೇನೆ. ಇಂದು ಅದೇ ಪರಂಪರೆಯ ಗಣ್ಯರೊಂದಿಗೆ ನಾನಿದ್ದೇನೆ. ಇಂತಹ ಅಪೂರ್ವ ಸಂದರ್ಭ ನನಗೆ ಮತ್ತೆಲ್ಲಿ ಸಿಗುತ್ತದೆ ಎಂದರು. 
ಮಠಗಳು, ಸಂತರು ಸಮಾಜದ ಹಿತಕ್ಕಾಗಿ ಶ್ರಮಿಸಿದ್ದಾರೆ. ಸಂಕಷ್ಟಗಳು ಬಂದಾಗಲೆಲ್ಲಾ ಮಹಾಪುರುಷರ ಜನನವಾಗುತ್ತದೆ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅಂತಹ ಸಾಧಕರು. ಅಂತಹ ಅಪೂರ್ವ ಸಂತರಿಗೆ ನಮಿಸಲೆಂದು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಪ್ರಧಾನಿ ಹೇಳಿದರು.
ಸಂತರು ಈ ದೇಶದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದಾರೆ. ದುಷ್ಟರ ವಿರೋಧದ ನಡುವೆಯೂ ಸಮಾಜ ಕಟ್ಟಿದ್ದಾರೆ. ಸ್ವಾಸ್ಥ್ಯ ಸಮಾಜ ಕಟ್ಟಿದವರು ನಮ್ಮ ದೇಶದ ಸಂತರು. ಅಂತಹ ನೂರಾರು ಸಂತರು ಇಲ್ಲಿದ್ದಾರೆ ಎಂದರು.
ಇದೇ ವೇಳೆ ಪಠಾಣ್ ಕೋಟ್ ದಾಳಿಯ ಬಗ್ಗೆ ಪ್ರಸ್ತಾಪಿಸಿದ ಮೋದಿ, ನಮ್ಮ ದೇಶದ ಸಿಪಾಯಿಗಳ ಬಗ್ಗೆ ನನಗೆ ಹೆಮ್ಮೆ ಇದೆ. ಪಾಕಿಸ್ತಾನಕ್ಕೆ ದಿಟ್ಟ ಎದಿರೇಟು ನೀಡಲು ಅವರು ಸಮರ್ಥರು. ಅವರ ಪರಿಶ್ರಮದಿಂದಾಗಿ ನಾವಿಂದು ನೆಮ್ಮದಿಯಾಗಿದ್ದೇವೆ. ಅವರಿಗೆ ದೇಶದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಕೊನೆಗೂ ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ಹಣದುಬ್ಬರ ಶೇ.5.2; ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್? ಆಹಾರ, ಇಂಧನ ಬೆಲೆ ಏರಿಕೆ!

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ