ಅಭಿಶೇಕ್ ಮುನು ಸಿಂಘ್ವಿ 
ಪ್ರಧಾನ ಸುದ್ದಿ

ಸೇನಾ ಕ್ಷಿಪ್ರಕ್ರಾಂತಿ: ಮನಿಶ್ ತಿವಾರಿ ಹೇಳಿಕೆಯಿಂದ 'ಕೈ' ದೂರ

2012ರಲ್ಲಿ ಸೇನಾ ಕ್ಷಿಪ್ರಕ್ರಾಂತಿ ಯತ್ನ ನಡೆದದ್ದು ನಿಜ ಎಂದಿದ್ದ ಕೇಂದ್ರ ಮಾಜಿ ಸಚಿವ ಮನಿಶ್ ತಿವಾರಿ ಅವರನ್ನು ಕೇಂದ್ರ ಸಚಿವ ವಿ ಕೆ ಸಿಂಗ್ ಅವರು ತರಾಟೆಗೆ...

ನವದೆಹಲಿ: 2012ರಲ್ಲಿ ಸೇನಾ ಕ್ಷಿಪ್ರಕ್ರಾಂತಿ ಯತ್ನ ನಡೆದದ್ದು ನಿಜ ಎಂದಿದ್ದ ಕೇಂದ್ರ ಮಾಜಿ ಸಚಿವ ಮನಿಶ್ ತಿವಾರಿ ಅವರನ್ನು ಕೇಂದ್ರ ಸಚಿವ ವಿ ಕೆ ಸಿಂಗ್ ಅವರು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ತಿವಾರಿ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ನಿರಾಕರಿಸಿದೆ.
ಮನಿಶ್ ತಿವಾರಿ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಕಾಂಗ್ರೆಸ್, ಸೇನಾಪಡೆಯ ಅಸಹಜ ಚಲನವಲನ ಕುರಿತಾದ ವರದಿ ತಪ್ಪು ಎಂದಿದೆ.
'ಕಾಂಗ್ರೆಸ್ ಪಕ್ಷದ ಪರವಾಗಿ ನಾನು ಆ ವರದಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕುತ್ತೇನೆ. ಸರ್ಕಾರದ ಗಮನಕ್ಕೆ ಬಾರದೆ ಅಂತಹ ಯಾವುದೇ ಸೇನಾ ಚಲನವಲನ ನಡೆದಿಲ್ಲ' ಎಂದು ಕಾಂಗ್ರೆಸ್ ನಾಯಕ ಪಿ.ಸಿ.ಚಾಕೋ ಅವರು ಹೇಳಿದ್ದಾರೆ.
ಅಂದಿನ ಸೇನಾ ಮುಖ್ಯಸ್ಥ ವಿ.ಜೆ.ಸಿಂಗ್ ಅವರ ಅವಧಿಯಲ್ಲಿ ಸೈನಿಕರ ದಂಡೊಂದು ಹರಿಯಾಣದಿಂದ ದೆಹಲಿಯತ್ತ ಅಸಹಜವಾಗಿ ಹೊರಟಿತ್ತು ಎಂಬ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯನ್ನು ಪಕ್ಷ ಅಧಿಕೃತವಾಗಿಯೇ ತಳ್ಳಿಹಾಕಿದೆ ಎಂದು ಚಾಕೋ ತಿಳಿಸಿದ್ದಾರೆ.
ಇನ್ನು ಹಿರಿಯ ಕಾಂಗ್ರೆಸ್ ನಾಯಕ ಅಭಿಶೇಕ್ ಮುನು ಸಿಂಘ್ವಿ ಅವರು ಈ ವರದಿಯನ್ನು ತಳ್ಳಿಹಾಕಿದ್ದು, ಆ ವರದಿಯಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!