ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಆಫ್ಘಾನಿಸ್ಥಾನದ ಪಾಕಿಸ್ತಾನ ರಾಯಭಾರ ಕಚೇರಿ ಬಳಿ ಉಗ್ರ ದಾಳಿ; ಆರು ಸಾವು

ಆಫ್ಘಾನಿಸ್ಥಾನದ ಜಲಾಲಾಬಾದ್ ನಗರದಲ್ಲಿ ಪಾಕಿಸ್ತಾನ ರಾಯಭಾರ ಕಚೇರಿಯನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಬುಧವಾರ ಕನಿಷ್ಠ ಆರು ಜನ ಪೊಲೀಸರು

ಕಾಬುಲ್: ಆಫ್ಘಾನಿಸ್ಥಾನದ ಜಲಾಲಾಬಾದ್ ನಗರದಲ್ಲಿ ಪಾಕಿಸ್ತಾನ ರಾಯಭಾರ ಕಚೇರಿಯನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಬುಧವಾರ ಕನಿಷ್ಠ ಆರು ಜನ ಪೊಲೀಸರು ಮೃತಪಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ದಾಳಿಕೋರರು ರಾಯಭಾರಿ ಕಚೇರಿ ಒಳಹೊಕ್ಕಲು ಪ್ರಯತ್ನಿಸಿದಾಗ ಆಫ್ಘನ್ ಭದ್ರತಾ ಪಡೆಗಳು ಹತ್ತಿರದ ಮನೆಯಿಂದ ಉಗ್ರರ ಮೇಲೆ ಪ್ರತಿ ದಾಳಿ ನಡೆಸಿದ್ದಾರೆ ಎಂದು ಪಾಕಿಸ್ತಾನ್ ನ್ಯೂಸ್ ವರದಿ ಮಾಡಿದೆ.

ಇದಕ್ಕೂ ಮುಂಚೆ ಮತ್ತೊಂದು ಮಾಧ್ಯಮದ ವರದಿಯ ಪ್ರಕಾರ ಪಾಕಿಸ್ತಾನಿ ರಾಯಭಾರಿ ಕಚೇರಿ ಬಳಿ ಸ್ಫೋಟಗೊಂಡಿತ್ತು ಎನ್ನಲಾಗಿತ್ತು. ಇದೇ ಪ್ರದೇಶದಲ್ಲಿ ಖಾಸಗಿ ಶಾಲೆ, ಇರಾನ್ ಮತ್ತು ಭಾರತದ ರಾಯಭಾರಿ ಕಚೇರಿಗಳು ಕೂಡ ಇವೆ.

"ಪಾಕಿಸ್ತಾನಿ ರಾಯಭಾರಿ ಕಚೇರಿ ಬಳಿಯಿದ್ದ ಪೊಲೀಸ್ ವಾಹನದ ಮೇಲೆ ಈ ಬಾಂಬ್ ದಾಳಿ ನಡೆದಿದೆ" ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮುಂಚೆ ಡಾನ್ ಅಂತರ್ಜಾಲ ಪತ್ರಿಕೆ ವರದಿ ಮಾಡಿದ್ದ ಪ್ರಕಾರ ಪಾಕಿಸ್ತಾನಿ ರಾಯಭಾರಿ ಕಚೇರಿ ಬಳಿ ಆತ್ಮಹತ್ಯಾ ಬಾಂಬರ್ ಸ್ಫೋಟಿಸಿಕೊಂಡದ್ದಕ್ಕೆ ಆರು ಜನ ಮೃತಪಟ್ಟಿದ್ದರು ಎಂದು ವರದಿ ಮಾಡಿತ್ತು.

ಉಗ್ರರು ರಾಯಭಾರಿ ಕಚೇರಿ ಒಳಹೊಕ್ಕಿದ್ದು, ಭದ್ರತಾ ಪಡೆಗಳೊಂದಿಗೆ ಗುಂಡಿನ ಕಾಳಗ ಜಾರಿಯಲ್ಲಿದೆ ಎಂದು ಭದ್ರತಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಏ.10 ಕ್ಕೆ ರಾಜ್ಯಸಭಾ ಸದಸ್ಯರಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ! ಸಿಎಂ ಸ್ಥಾನಕ್ಕೆ ರಾಜೀನಾಮೆ?

ಅಕ್ರಮ ಬಾಂಗ್ಲಾ ವಲಸಿಗರಿಗೆ ಹೊಸ ತಲೆನೋವು; ಗಡಿಗಳಲ್ಲಿ ಹಾವು. ಮೊಸಳೆಗಳ ನಿಯೋಜನೆ: BSF ಗಂಭೀರ ಚಿಂತನೆ!

ಇರಾನ್ ವಿರುದ್ಧದ ಯುದ್ಧ ಅಮೆರಿಕಾಗೆ ತಿರುಗುಬಾಣ!: ಇಂಧನ, ಸಾರಿಗೆ ದರ ದುಪ್ಪಟ್ಟು, ಜನಸಾಮಾನ್ಯರು ಹೈರಾಣ; ಟ್ರಂಪ್ ಗೆ ಹಿಡಿಶಾಪ!

IPL 2026: B***s Of Steel" ರವಿಶಾಸ್ತ್ರಿ ಹೇಳಿಕೆ ಕುರಿತು ನೆಟ್ಟಿಗರಿಂದ ತೀವ್ರ ಚರ್ಚೆ!

ಇರಾನ್ ನಲ್ಲಿ ಬೃಹತ್ ಸೇನಾ ಕಾರ್ಯಾಚರಣೆ: ಹಲವು ಮಿಲಿಟರಿ ನಾಯಕರ ಹತ್ಯೆ- ಡೊನಾಲ್ಡ್ ಟ್ರಂಪ್! Video

SCROLL FOR NEXT