ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇವಸ್ಥಾ ನಕ್ಕೆ ಮಹಿಳೆ ಯರ ಪ್ರವೇಶಕ್ಕಿರುವ ನಿರ್ಬಂಧವನ್ನು ಮುಂದುವರಿಸುತ್ತೇವೆ. ಇದು ಹಲವು ವರ್ಷಗಳಿಂದ ನಡೆದುಬಂದಿರುವ ಸಂಪ್ರದಾಯ ಹಾಗೂ ಪರಂಪರೆಯ ಭಾಗವಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ)ಮಂಗಳವಾರ ತಿಳಿಸಿದೆ.
ದೇವಾಲಯ ಪ್ರವೇಶಕ್ಕೆ ಮಹಿಳೆ ಯರಿಗೇಕೆ ನಿರ್ಬಂಧ ವಿಧಿಸಬೇಕು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದ ಮಾರನೇ ದಿನವೇ ಟಿಡಿಬಿ ಈ ಸ್ಪಷ್ಟನೆ ನೀಡಿದೆ. 10 ರಿಂದ 50 ವಯಸ್ಸಿನೊಳಗಿನ ಮಹಿಳೆಯರಿಗೆ ದೇಗುಲ ಪ್ರವೇಶಕ್ಕಿರುವ ನಿಷೇಧವನ್ನು ಮುಂದುವರಿಸುವ ವಿಚಾರವಾಗಿ ನಮ್ಮ ನಿಲುವನ್ನು ಸುಪ್ರೀಂ ಕೋರ್ಟ್‍ನಲ್ಲಿ ಅರಿಕೆ ಮಾಡಲಿದ್ದೇವೆ ಎಂದೂ ಟಿಡಿಬಿ ತಿಳಿಸಿದೆ.