ಭಾರತದತ್ತ ಮುಖ ಮಾಡಿದ ಪಾಕ್ ಅಣ್ವಸ್ತ್ರಗಳು (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಭಾರತದತ್ತ ಮುಖ ಮಾಡಿವೆ ಪಾಕ್ ನ 130 ಅಣ್ವಸ್ತ್ರಗಳು..!

ಅಮೆರಿಕದ ಖ್ಯಾತ ಸಂಶೋಧನಾ ಸಂಸ್ಥೆ "ಕಾಂಗ್ರೆಷನಲ್ ರಿಸರ್ಚ್ ಸರ್ವೀಸ್ (CRS)" ಈ ವರದಿಯನ್ನು ನೀಡಿದ್ದು, ಭಾರತದ ಸಂಭಾವ್ಯ ಮಿಲಿಟರಿ ಕಾರ್ಯಾಚರಣೆಯನ್ನು ಹಿಮ್ಮೆಟಿಸಲು ಪಾಕಿಸ್ತಾನ ತನ್ನ 130 ಅಥವಾ ಅದಕ್ಕಿಂತಲೂ ಹೆಚ್ಚು ಅಣ್ವಸ್ತ್ರಗಳನ್ನು ಭಾರತದತ್ತ ತಿರುಗಿಸಿ ಇಟ್ಟಿದೆ ಎಂದು ಹೇಳಿದೆ...

ವಾಷಿಂಗ್ಟನ್: ಪಾಕಿಸ್ತಾನದಲ್ಲಿ ಸುಮಾರು 130 ಅಣ್ವಸ್ತ್ರಗಳನ್ನು ಭಾರತದತ್ತ ಗುರಿಯಾಗಿಸಿ ಇಡಲಾಗಿದೆ ಎಂದು ವರದಿಯೊಂದು ಹೇಳಿದೆ.

ಅಮೆರಿಕದ ಖ್ಯಾತ ಸಂಶೋಧನಾ ಸಂಸ್ಥೆ "ಕಾಂಗ್ರೆಷನಲ್ ರಿಸರ್ಚ್ ಸರ್ವೀಸ್ (CRS)" ಈ ವರದಿಯನ್ನು ನೀಡಿದ್ದು, ಭಾರತದ ಸಂಭಾವ್ಯ ಮಿಲಿಟರಿ ಕಾರ್ಯಾಚರಣೆಯನ್ನು ಹಿಮ್ಮೆಟಿಸಲು ಪಾಕಿಸ್ತಾನ ತನ್ನ 130 ಅಥವಾ ಅದಕ್ಕಿಂತಲೂ ಹೆಚ್ಚು ಅಣ್ವಸ್ತ್ರಗಳನ್ನು ಭಾರತದತ್ತ ತಿರುಗಿಸಿ ಇಟ್ಟಿದೆ ಎಂದು ಹೇಳಿದೆ. ಇನ್ನು CRS ನ ಈ ಹೊಸ ವರದಿ ದಕ್ಷಿಣ ಏಷ್ಯಾದ ಪ್ರಬಲ ದೇಶಗಳ  ನಡುವಿನ ಅಣ್ವಸ್ತ್ರ ಸಂಘರ್ಷಕ್ಕೆ ಕಾರಣವಾಗಿದೆ.

ಪಾಕಿಸ್ತಾನ ಸೇನೆಯ ಈ ಕಾರ್ಯಕ್ಕೆ ರಾಜಧಾನಿ ಇಸ್ಲಾಮಾಬಾದಿನಿಂದ ಆರ್ಥಿಕ ಮತ್ತು ತಾಂತ್ರಿಕ ನೆರವು ದೊರೆಯುತ್ತಿದ್ದು, ಗಡಿಯಲ್ಲಿ ಹೆಚ್ಚುವರಿ ಅಣ್ವಸ್ತ್ರಗಳನ್ನು ಮತ್ತು ಹೊಸ ಅತ್ಯಾಧುನಿಕ  ಉಡಾವಣಾ ವಾಹಕಗಳನ್ನು ನಿಯೋಜನೆಗೊಳಿಸಲಾಗಿದೆ. ಸುಮಾರು 110ರಿಂದ 130 ಅಥವಾ ಅದಕ್ಕಿಂತಲೂ ಹೆಚ್ಚು ಅಣ್ವಸ್ತ್ರಗಳು ಭಾರತದತ್ತ ಮುಖ ಮಾಡಿ ಉಡಾವಣೆಯಾಗಲು ಸಜ್ಜಾಗಿ ನಿಂತಿವೆ ಎಂದು ಸಿಆರ್ ಎಸ್ ತನ್ನ ವರದಿಯಲ್ಲಿ ಹೇಳಿದೆ.

ಸಿಆರ್ ಸಿ ಸಲ್ಲಿಕೆ ಮಾಡಿರುವ ಒಟ್ಟು 28 ಪುಟಗಳ ಈ ವರದಿಯಲ್ಲಿ, ಪಾಕಿಸ್ತಾನದ ರಹಸ್ಯ ಅಣ್ವಸ್ತ್ರ ಯೊಜನೆಗಳ ಕುರಿತು ಬೆಳಕು ಚೆಲ್ಲಲಾಗಿದೆ. ಭಾರತದ ಪ್ರಬಲ ಮಿಲಿಟರಿಯನ್ನು ಎದುರಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಸಜ್ಜಾಗುತ್ತಿದ್ದು, ಇದಕ್ಕಾಗಿ ತನ್ನ ಅಣ್ವಸ್ತ್ರ ಯೋಜನೆಗಳನ್ನು ವಿಸ್ತರಿಸಿದೆ. ಹೊಸ ಬಗೆಯ ಅಣ್ವಸ್ತ್ರ ತಯಾರಿಕೆಗೆ ಪಾಕಿಸ್ತಾನ ಸರ್ಕಾರ ಅನುಮೋದನೆ ನೀಡಿದ್ದು, ಇದಕ್ಕೆ ಬೇಕಾದ ಎಲ್ಲ ಸಹಕಾರವನ್ನು ಪಾಕಿಸ್ತಾನ ತನ್ನ ಸೇನಾ ಪಡೆಗೆ ನೀಡುತ್ತಿದೆ ಎಂದು ಸಿಆರ್ ಎಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಅಲ್ಲದೆ ಪಾಕಿಸ್ತಾನ ಸರ್ಕಾರದ ಈ ನಡೆ ಉಭಯ ಅಣ್ವಸ್ತ್ರ ರಾಷ್ಟ್ರಗಳ ನಡುವಿನ ಅಣ್ವಸ್ತ್ರ ಸಂಘರ್ಷಕ್ಕೆ ಕಾರಣವಾಗಲಿದೆ ಎಂದೂ ಅದು ಆತಂಕ ವ್ಯಕ್ತಪಡಿಸಿದೆ.

ಕಾಂಗ್ರೆಷನಲ್ ರಿಸರ್ಚ್ ಸರ್ವೀಸ್ ಸಂಸ್ಥೆ ಅಮೆರಿಕ ಕಾಂಗ್ರೆಸ್ ನ ಸ್ವತಂತ್ರ ತನಿಖಾ ಸಂಸ್ಥೆಯಾಗಿದ್ದು, ಇದರ ತನಿಖಾ ವರದಿಗಳನ್ನು ಮತ್ತು ಶಿಫಾರಸ್ಸುಗಳನ್ನು ಅಮೆರಿಕ ಕಾಂಗ್ರೆಸ್ ನ ಅಧಿಕೃತ  ಚಿಂತನೆ ಎಂದೇ ಪರಿಗಣಿಸಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT