ಕೊಚ್ಚಿ: ಬಾರ್ ಮಾಲೀಕರಿಂದ ಲಂಚ ಪಡೆದ ಆರೋಪ ಎದುರಿಸುತ್ತಿರುವ ಕೇರಳ ಅಬಕಾರಿ ಸಚಿವ ಕೆ.ಬಾಬು ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಸಚಿವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ವಿಚಕ್ಷಣಾ ಹಾಗೂ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಬಾಬು ಅವರು ಇಂದು ತಮ್ಮ ರಾಜಿನಾಮೆ ಪತ್ರವನ್ನು ಮುಖ್ಯಮಂತ್ರಿ ಉಮನ್ ಚಾಂಡಿ ಅವರಿಗೆ ಸಲ್ಲಿಸಿದ್ದಾರೆ.
ಬಾಬು ಅವರು ಬಾರ್ ಮಾಲೀಕರಿಂದ ಲಂಚ ಪಡೆದ ಪ್ರಕರಣದಲ್ಲಿ ರಾಜಿನಾಮೆ ನೀಡಿದ ಎರಡನೇ ಸಚಿವರಾಗಿದ್ದಾರೆ. ಈ ಇದೇ ಪ್ರಕರಣ ಸಂಬಂಧ ವಿತ್ತ ಸಚಿವರಾಗಿದ್ದ ಕೆ.ಎಂ.ಮಣಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ರಾಜಿನಾಮೆ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಾಬು, ತಾವು ಮುಖ್ಯಮಂತ್ರಿಗಳಿಗೆ ರಾಜಿನಾಮೆ ಪತ್ರ ಸಲ್ಲಿಸಿರುವುದಾಗಿ ಹೇಳಿದರು. ಸಿಪಿಎಂ ಕೆಟ್ಟ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.