ಮಾರ್ಚ್ ನಂತರ ಮತ್ತೆ ಸಮ-ಬೆಸ ವಾಹನ ಕಡಿವಾಣ ಸಾಧ್ಯತೆ: ದೆಹಲಿ ಸಚಿವ
ಸಮ-ಬೆಸ ವಾಹನ ನೊಂದಣಿ ಸಂಖ್ಯೆ ಆಧಾರದ ಮೇಲೆ ಬದಲಿ ದಿನ ವಾಹನ ಕಡಿವಾಣದ ನಿಯಮವನ್ನು ಮಾರ್ಚ್ ನಂತರ ಮತ್ತೆ ಜಾರಿ ಮಾಡುವ ಸಾಧ್ಯತೆಯಿದೆ ಮತ್ತು ಈ ಅಭಿಯಾನಕ್ಕೆ
ನವದೆಹಲಿ: ಸಮ-ಬೆಸ ವಾಹನ ನೊಂದಣಿ ಸಂಖ್ಯೆ ಆಧಾರದ ಮೇಲೆ ಬದಲಿ ದಿನ ವಾಹನ ಕಡಿವಾಣದ ನಿಯಮವನ್ನು ಮಾರ್ಚ್ ನಂತರ ಮತ್ತೆ ಜಾರಿ ಮಾಡುವ ಸಾಧ್ಯತೆಯಿದೆ ಮತ್ತು ಈ ಅಭಿಯಾನಕ್ಕೆ ಇನ್ನು ಹೆಚ್ಚಿನ ಸಿದ್ಧತೆ ಬೇಕಾಗಿದೆ ಎಂದು ಸಾರಿಗೆ ಸಚಿವ ಗೋಪಾಲ್ ರೈ ಶನಿವಾರ ಹೇಳಿದ್ದರೆ.
"ಸರಿ-ಬೆಸ ಯೋಜನೆಯನ್ನು ದೆಹಲಿಯಲ್ಲಿ ಮಾರ್ಚ್ ತಿಂಗಳ ನಂತರ ಜಾರಿ ಮಾಡುವ ಸಾಧ್ಯತೆಯಿದೆ. ಇದಕ್ಕಾಗಿ ನಾವು ಕೆಲವು ಸಿದ್ಧತೆಗಳನ್ನು ನಡೆಸಿದ್ದೇವೆ" ಎಂದು ರೈ ಹೇಳಿದ್ದಾರೆ.
ಈ ಯೋಜನೆಯನ್ನು ಪ್ರಯೋಗಾತ್ಮಕವಾಗಿ ದೆಹಲಿ ಸರ್ಕಾರ ಜನವರಿ ೧ ರಿಂದ ೧೫ ರವರೆಗೆ ಜಾರಿ ಮಾಡಿತ್ತು ಹಾಗು ಇದರಿಂದ ವಾಯು ಮಾಲಿನ್ಯದಲ್ಲಿ ಭಾರಿ ಇಳಿಮುಖವಾದದ್ದು ದಾಖಲೆಯಾಗಿತ್ತು.
ಈ ವರ್ಷಾಂತ್ಯಕ್ಕೆ ಹೆಚ್ಚುವರಿ ೩೦೦೦ ಬಸ್ಸುಗಳನ್ನು ಸಾರ್ವಜನಿಕ ಪ್ರಯಾಣಕ್ಕೆ ಸೇರಿಸಲಾಗುವುದು ಎಂದು ಕೂಡ ಸಚಿವರು ಹೇಳಿದ್ದಾರೆ.