ಕಾಶ್ಮೀರಿ ಪ್ರತ್ಯೇಕವಾದಿ ನಾಯಕ ಸಯ್ಯದ್ ಅಲಿ ಗೀಲಾನಿ
ಶ್ರೀನಗರ: ಇಸ್ಲಾಮಿಕ್ ಸ್ಟೇಟ್ ನ 'ಕ್ಯಾಲಿಫತ್' ಸಾಮ್ರಾಜ್ಯವನ್ನು ಕಾಶ್ಮೀರಕ್ಕೆ ವಿಸ್ತರಿಸಲಿದ್ದೇವೆ ಎಂಬ ಉಗ್ರಗಾಮಿ ಸಂಘಟನೆಯ ಹೇಳಿಕೆಯನ್ನು ತಿರಸ್ಕರಿಸಿರುವ ಕಾಶ್ಮೀರಿ ಪ್ರತ್ಯೇಕವಾದಿ ನಾಯಕ ಸಯ್ಯದ್ ಅಲಿ ಗೀಲಾನಿ ಈ ಉಗ್ರಗಾಮಿ ಸಂಘಟನೆ ಕಾಶ್ಮೀರಕ್ಕೆ ನುಸುಳಲು ಸಾಧ್ಯವಿಲ್ಲ ಎಂದಿದ್ದಾರೆ.
"ಕಾಶ್ಮೀರ ವಿವಾದ ಭಾರತದೊಂದಿಗಿನ ೭ ದಶಕಗಳ ಸಂಘರ್ಷ. ಭಾರತ ಈ ಪ್ರದೇಶವನ್ನು ಮಿಲಿಟರಿ ಪಡೆಯಿಂದ ಆಕ್ರಮಿಸಿಕೊಂಡಿದೆ. ಆದರೆ ಇಸ್ಲಾಮಿಕ್ ಸ್ಟೇಟ್ ಎರಡು ಮೂರು ವರ್ಷದ ಸಂಘಟನೆಯಾಗಿದ್ದು, ಮುಸ್ಲಿಮರ ಜಗತ್ತನ್ನು ನಾಗರಿಕ ಯುದ್ಧಕ್ಕೆ ನೂಕಿ, ಮುಸ್ಲಿಮರು ಪರಸ್ಪರ ಕೊಲ್ಲುವಂತೆ ಮಾಡಿದೆ" ಎಂದು ೮೬ ವರ್ಷದ ಗೀಲಾನಿ ಶನಿವಾರ ಹೇಳಿದ್ದಾರೆ.
ಭಾರತ ಕಾಶ್ಮೀರಿ ಸ್ವತಂತ್ರ ಚಳುವಳಿಯನ್ನು ಭಯೋತ್ಪಾದನೆ ಎಂದು ಕರೆಯಲು ಶತ ಪ್ರಯತ್ನ ನಡೆಸುತ್ತಿದೆ ಇದೇ ಸಮಯದಲ್ಲಿ ಇಸ್ಲಾಮಿಕ್ ಸ್ಟೇಟ್ ಕಾಶ್ಮೀರದ ಬಗ್ಗೆ ಇಂತಹ ಹೇಳಿಕೆ ನೀಡಿರುವುದು ಪರದೆಯ ಹಿಂದೆ ಅಪಯಾಕರಿ ಯೋಜನೆಗಳ ಮುನ್ಸೂಚನೆ ನೀಡುತ್ತದೆ ಎಂದಿದ್ದಾರೆ.