ಪ್ರಧಾನ ಸುದ್ದಿ

ಉಗ್ರ ನಿಗ್ರಹಕ್ಕೆ, ಹವಾಮಾನ ಬದಲಾವಣೆಗೆ ಸಹಕಾರ ನೀಡಿ: ಹೊಲಾಂಡೆ

Lingaraj Badiger
ನವದೆಹಲಿ: ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರು ಭಯೋತ್ಪಾದನೆ ನಿಯಂತ್ರಣಕ್ಕೆ ಉಭಯ ದೇಶಗಳು ನಡವಿನ ಸಹಕಾರ ಮತ್ತಷ್ಟು ಬಲಗೊಳ್ಳಬೇಕು ಎಂಬ ತಮ್ಮ ಭಾರತ ಭೇಟಿಯ ಉದ್ದೇಶವನ್ನು ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಫ್ರಾನ್ಸ್ ಅಧ್ಯಕ್ಷ ಹೊಲಾಂಡೆ ಅವರು, ಪ್ಯಾರಿಸ್‌ನಲ್ಲಿ ನಡೆದ ಹವಾಮಾನ ಬದಲಾವಣೆ ಶೃಂಗದಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ. ಅಲ್ಲದೆ ಹವಾಮಾನ ಬದಲಾವಣೆ ಹಾಗೂ ಆರ್ಥಿಕ ಸಹಕಾರಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಉಭಯ ರಾಷ್ಟ್ರಗಳು ಬೆಂಬಲಿಸಲಿವೆ ಎಂದು ಹೇಳಿದ್ದಾರೆ.
ನಾಳಿನ ಗಣರಾಜ್ಯೋತ್ಸವದ ಮುಖ್ಯ ಅಥಿತಿಯಾಗಿರುವ ಹೊಲಾಂಡೆ ಅವರಿಗೆ ಇಂದು ರಾಷ್ಟ್ರಪತಿಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ಮೋದಿ ಅವರು ವಿಧ್ಯುಕ್ತ ಸ್ವಾಗತ ನೀಡಿದರು.
ಈ ವೇಳೆ ಮಾತನಾಡಿದ ಹೊಲಾಂಡೆ ಅವರು, ಭಾರತ ಮತ್ತು ಫ್ರಾನ್ಸ್ ಉಗ್ರರಿಂದ ಎಲ್ಲಾ ರೀತಿಯ ಬೆದರಿಕೆಗಳನ್ನು ಎದರಿಸುತ್ತಿದ್ದು, ಉಗ್ರರ ವಿರುದ್ಧದ ಹೋರಾಟಕ್ಕೆ ಉಭಯ ದೇಶಗಳ ನಡುವಿನ ಸಹಕಾರ ಮತ್ತಷ್ಟು ಬಲಗೊಳಿಸುವುದೇ ನನ್ನ ಭಾರತ ಭೇಟಿಯ ಪ್ರಮುಖ ಉದ್ದೇಶ ಎಂದರು. ಅಲ್ಲದೆ ಐಸಿಸ್‌ ಉಗ್ರರ ಬೆದರಿಕೆಗೆ ಮಣಿಯುವುದಿಲ್ಲ, ಐಸಿಸ್‌ ಉಗ್ರ ಸಂಘಟನೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುವುದು ನಮ್ಮ ಗುರಿಯಾಗಿದೆ' ಎಂದರು.
SCROLL FOR NEXT