ಪ್ರಧಾನ ಸುದ್ದಿ

ರೋಹಿತ್ ವೇಮುಲಾ ಉಚ್ಛಾಟನೆ ಮಾಡಿದ್ದ ಸಮಿತಿಯ ಅಧ್ಯಕ್ಷ ಈಗ ಉಪಕುಲಪತಿ

Guruprasad Narayana
ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡದ್ದಕ್ಕೆ ತೀವ್ರ ವಿರೋಧದ ಮಧ್ಯೆ ಉಪಕುಲಪತಿ ಅಪ್ಪ ರಾವ್ ಉಪಕುಲಪತಿ ಹುದ್ದೆಯಿಂದ ಬದಿಗೆ ಸರಿದಿದ್ದು, ಇನ್ನೂ ಹೆಚ್ಚಿನ ಪ್ರತಿಭಟನೆಗಳಿಗೆ ಎಡೆಮಾಡಿಕೊಡಬಹುದಾದ ನಡೆಯಲ್ಲಿ ದಲಿತ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ನಿಲಯದಿಂದ ಉಚ್ಛಾಟಿಸಲು ಶಿಫಾರಸ್ಸು ಮಾಡಿದ್ದ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ವ್ಯಕ್ತಿ ಉಪಕುಲಪತಿ ಹುದ್ದೆಯನ್ನು ಅಲಂಕರಿಸಿದ್ದಾರೆ. 
ಪೋಲೀಸರು ದಾಖಲಿಸಿರುವ ಎಫ್ ಐ ಆರ್ ನಲ್ಲಿ ಸೇರಿರುವ ಪ್ರೊ. ಅಪ್ಪ ರಾವ್ ವೈಯಕ್ತಿಕ ಕಾರಣಗಳನ್ನು ನೀಡಿ ರಜೆಯ ಮೇಲೆ ಹೋಗಿದ್ದರೆ. ಅವರ ಸ್ಥಾನವನ್ನು ಪ್ರೊ. ವಿಪಿನ್ ಶ್ರೀವಾಸ್ತವ ಅಲಂಕರಿಸಿದ್ದಾರೆ. 
ಈಗಗಾಲೇ ಪ್ರತಿಭಟನೆಗೆ ಮಣಿದು ರೋಹಿತ್ ಗೆಳೆಯರನ್ನು ಮತ್ತೆ ವಿದ್ಯಾರ್ಥಿನಿಲಯಕ್ಕೆ ಹಿಂದಿರುಗುವ ಅವಕಾಶ ನೀಡಲಾಗಿದೆ ಹಾಗೂ ಈಗ ಉಪಕುಲಪತಿ ಅಪ್ಪ ರಾವ್ ಕೂಡ ಸ್ಥಾನವನ್ನು ತೆರವು ಮಾಡಿದ್ದು ವಿಶ್ವವಿದ್ಯಾಲಯ ಸಾಮಾನ್ಯ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವುದನ್ನು ನಿರೀಕ್ಷಿಸಲಾಗಿದೆ. 
SCROLL FOR NEXT