ಕೇರಳ ಮುಖ್ಯಮಂತ್ರಿ ಉಮನ್ ಚಾಂಡಿ
ತಿರುವನಂತಪುರಂ: ಸೋಲಾರ್ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಕೇರಳದ ಮುಖ್ಯಮಂತ್ರಿ ಉಮನ್ ಚಾಂಡಿ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಕೋರ್ಟ್ ಗುರುವಾರ ಸೂಚನೆ ನೀಡಿದೆ.
ಸೋಲಾರ ಹಗರಣದಲ್ಲಿ ಆರೋಪಿಯಾಗಿರುವ ಸರಿತಾ ನಾಯರ್, ಮುಖ್ಯಮಂತ್ರಿ ಉಮನ್ ಚಾಂಡಿಯವರಿಗೆ ರು.1.90 ಕೋಟಿ ಲಂಚ ನೀಡಿರುವುದಾಗಿ ಹೇಳಿಕೆ ನೀಡಿದ್ದರು.
ಈ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದ ತ್ರಿಶೂರ್ ವಿಜಿಲೆನ್ಸ್ ಕೋರ್ಟ್, ಉಮನ್ ಚಾಂಡಿ ಹಾಗೂ ಇಂದನ ಸಚಿವರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಸೂಚನೆ ನೀಡಿದೆ.
ಸೋಲಾರ ಯೋಜನೆಗಾಗಿ ಅನುಮತಿ ಪಡೆಯಲು ತಮ್ಮ ಸಹದ್ಯೋಗಿಯೊಬ್ಬರು ಸಿಎಂ ಉಮನ್ ಚಾಂಡಿಗೆ ಲಂಚ ನೀಡಿದ್ದರು. ಚಾಂಡಿಯವರ ಆಪ್ತ ಕಾರ್ಯದರ್ಶಿ ಚಿಕ್ಕುಮೊನ್ ಜಾಕೋಬ್ 7 ಕೋಟಿ ರುಪಾಯಿಗಳ ಲಂಚದ ಬೇಡಿಕೆ ಇಟ್ಟಿದ್ದರು. ಅದಲ್ಲದೇ, ವಿದ್ಯುತ್ ಖಾತೆ ಸಚಿವ ಆರ್ಯದಾನ್ ಮುಹಮ್ಮದ್ ಅವರಿಗೆ ಅವರ ಕಾರ್ಯದರ್ಶಿ ಕೇಶವನ್ ರು.80 ಲಕ್ಷ ಲಂಚವಾಗಿ ಸ್ವೀಕರಿಸಿದ್ದರು ಎಂದು ಸರಿತಾ ತನಿಖಾ ಆಯೋಗಕ್ಕೆ ತಿಳಿಸಿದ್ದರು.