ಶ್ರೀನಗರ: ಈ ವರ್ಷದ ಅಮರನಾಥ ಯಾತ್ರೆ ಪ್ರಾರಂಭವಾಗಿದ್ದು, ಜಮ್ಮು ಕಾಶ್ಮೀರದ ಅನಂತನಾಗ್ ಮತ್ತು ಗಂದೇರ್ಬಾಲ್ ಜಿಲ್ಲೆಗಳ ಶಿಬಿರಗಳಿಂದ ಸುಮಾರು 9000 ಭಕ್ತಾದಿಗಳು ಶಿವಲಿಂಗ ದರ್ಶನಕ್ಕೆ ಶನಿವಾರ ಹೊರಟಿದ್ದಾರೆ.
"ಬಲ್ತಾಲ್ ಶಿಬಿರದಲ್ಲಿ (ಗಂದೇರ್ಬಾಲ್) ನೆಲೆಸಿದ್ದ 7500 ಭಕ್ತಾದಿಗಳಲ್ಲಿ ಸುಮಾರು 4000 ಜನ ಡುಮೈಲ್ ಬಾಗಿಲು ದಾಟಿದ್ದು, ಗುಹಾ ದೇವಾಲಯದ 14 ಕಿಲೋ ಮೀಟರ್ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ನುಂವಾನ್ ಶಿಬಿರದಿಂದ (ಅನಂತನಾಗ್ ಜಿಲ್ಲೆಯ ಪಹಲ್ಗಾಮ್) 1600 ಯಾತ್ರಾತ್ರಿಗಳು ಚಂದನ್ವಾರಿ ದಾಟಿದ್ದು ಬೆಳಗ್ಗೆ ಗುಹಾ ದೇವಾಲಯದ ಕಡೆಗೆ ಹೊರಟಿದ್ದಾರೆ.
ಜಮ್ಮು ಕಾಶ್ಮೀರದ ರಾಜ್ಯಪಾಲ ಎನ್ ಎನ್ ವೋಹ್ರಾ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕೂಡ ಅಮರನಾಥ ಗುಹಾ ದೇವಾಲಯಕ್ಕೆ ಶನಿವಾರ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.
ವೋಹ್ರಾ ಮತ್ತು ರಾಜನಾಥ್ ಈ ಸಂದರ್ಭದಲ್ಲಿ ರೂಪುಗೊಳ್ಳುವ ಹಿಮ ಶಿವಲಿಂಗದ ದರ್ಶನ ಮಾಡಲಿದ್ದಾರೆ. ಈ ವರ್ಷದ 48 ದಿನಗಳ ಉತ್ಸವ ಆಗಸ್ಟ್ 17ಕ್ಕೆ ಕೊನೆಗೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics